ಬೆಂಗಳೂರು : ಬೆಂಗಳೂರಲ್ಲಿ ಅಕ್ರಮವಾಗಿ ವಾಸವಿದ್ದ ವಿದೇಶಿ ಪ್ರಜೆಗಳ ವಿರುದ್ಧ ಇದೀಗ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಶ್ರೀಲಂಕಾದ ಮೂವರು ಪ್ರಜೆಗಳ ವಿರುದ್ಧ ಪ್ರಕರಣ ದಾಖಲಾಗಿದೆ. ದೇವನಹಳ್ಳಿ ಠಾಣಾ ವ್ಯಾಪ್ತಿಯ ಅಪಾರ್ಟ್ಮೆಂಟ್ ನಲ್ಲಿ ಶ್ರೀಲಂಕಾದ ಮೂವರು ಪ್ರಜೆಗಳು ವಾಸವಿದ್ದರು.
ಇದೀಗ ಮೂವರು ಶ್ರೀಲಂಕಾ ಪ್ರಜೆಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಶ್ರೀಲಂಕಾದ ಜಾಫ್ನ ದಿಂದ ಬೋಟ್ ಮೂಲಕ ತಮಿಳುನಾಡಿಗೆ ಮೂವರು ಶ್ರೀಲಂಕಾ ಪ್ರಜೆಗಳು ಎಂಟ್ರಿ ಆಗಿದ್ದಾರೆ. ಅಲ್ಲಿಂದ ನೇರವಾಗಿ ರಾಮೇಶ್ವರಂ ಗೆ ಹೋಗಿದ್ದ ಮೂವರು ಶ್ರೀಲಂಕಾ ಪ್ರಜೆಗಳು, ಬಳಿಕ ಸ್ಥಳೀಯ ವ್ಯಕ್ತಿಯ ಸಹಾಯ ಪಡೆದು ಬೆಂಗಳೂರಿಗೆ ಬಂದಿದ್ದರು. ಬೆಂಗಳೂರಿನಲ್ಲಿ ಅಕ್ರಮವಾಗಿ ಮೂವರು ವಾಸವಿದ್ದರು. ಇದೀಗ ಶ್ರೀಲಂಕಾದ ಮೂವರು ಪ್ರಜೆಗಳ ವಿರುದ್ಧ ಪ್ರಕರಣ ದಾಖಲಾಗಿದೆ.