ಬೆಂಗಳೂರು: ರಾಜ್ಯ ಸರ್ಕಾರದಿಂದ ( Karnataka Government ) ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರವನ್ನು ಅತ್ಯಾಚಾರ ತಡೆಗೆ ಕೈಗೊಳ್ಳಲಾಗಿದೆ. ಅದರ ಭಾಗವಾಗಿ ಸಚಿವ ಸಂಪುಟ ಸಭೆಯಲ್ಲಿ ಸಾರ್ವಜನಿಕರ ವಾಹನಗಳಲ್ಲಿ ಟ್ರ್ಯಾಕಿಂಗ್ ಡಿವೈಸ್ ಅಳವಡಿಸೋದಕ್ಕೆ ಅನುಮೋದನೆಯನ್ನು ನೀಡಲಾಗಿದೆ.
ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraj Bommai ) ಅವರ ನೇತೃತ್ವದಲ್ಲಿ ಮಹತ್ವದ ಸಚಿವ ಸಂಪುಟ ಸಭೆ ( Cabinet Meeting ) ನಡೆಯಿತು. ಈ ಸಭೆಯ ನಿರ್ಣಯಗಳನ್ನು ಸಚಿವ ಸಂಪುಟ ಸಭೆ ಮುಕ್ತಾಯದ ನಂತ್ರ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿಯವರು ಸುದ್ದಿಗೋಷ್ಠಿಯಲ್ಲಿ ನಡೆಸಿ ಮಾಹಿತಿ ನೀಡಿದಂತ ಅವರು, ಬ್ಯಾಟರಾಯನಪುರದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ನಿರ್ಮಾಣಕ್ಕೆ ಟೆಂಡರ್ ಆಗಿತ್ತು. ಅದರೆ ಇದು ಟೇಕಾಫ್ ಆಗಿರಲಿಲ್ಲ. ಟೆಂಡರ್ ರದ್ಧು ಪಡಿಸಿದ್ದೇವೆ. ಹೊಸ ಟೆಂಡರ್ ಕರೆಯಲು ಅನುಮತಿ ಕೊಟ್ಟಿದ್ದೇವೆ ಎಂದರು.
ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಐಟಿ ವಿಸ್ತರಣೆಗಾಗಿ 931.15 ಕೋಟಿ ವೆಚ್ಚದ ಅನುದಾನಕ್ಕೆ ಅನುಮೋದನೆ ನೀಡಲಾಗಿದೆ. ತಗಚಿಗೆರೆಯಲ್ಲಿ ಗೃಹ ಮಂಡಳಿಗೆ ಭೂಮಿ ಕೊಡಲಾಗಿತ್ತು. ಭೂಮಿಯ ರೈತರು ಹೆಚ್ಚು ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದರು. ಅವರಿಗೆ ನಿವೇಶನ ನೀಡಲು ಸಂಪುಟ ಒಪ್ಪಿಗೆ ನೀಡಿದೆ ಎಂದರು.
ಬಳ್ಳಾರಿ ಏರ್ಪೋಟ್ ನಿರ್ಮಾಣ ಟೆಂಡರ್ ರದ್ಧುಗೊಳಿಸಲಾಗಿದೆ. ಹೊಸದಾಗಿ ಟೆಂಡರ್ ಕರೆಯಲು ಅನುಮತಿಯನ್ನು ಇಂದಿನ ಸಚಿವ ಸಂಪುಟ ಸಭೆಯಲ್ಲಿ ನೀಡಲಾಗಿದೆ. ಹೊಸ ವಿಮಾನನಿಲ್ದಾಣ ನಿರ್ಮಾಣಕ್ಕೆ ಅನುಮತಿ ನೀಡಿದೆ ಎಂದು ತಿಳಿಸಿದರು.
ಗೋಕಾಕ್ ಕೌಜಲಗಿ ಸುತ್ತಮುತ್ತ ಲಿಫ್ಟ್ ಇರಿಗೇಶನ್ ಗಾಗಿ 32 ಕೋಟಿ ಅನುದಾನಕ್ಕೆ ಸಂಪುಟ ಒಪ್ಪಿಗೆ ನೀಡಿದೆ. ಬೆಂಗಳೂರು ರಸ್ತೆ ಅಭಿವೃದ್ಧಿಗೆ ಅನುಮತಿ ನೀಡಲಾಗಿದೆ. ವರ್ತೂರು ಬಳಿ ಎಲಿವೇಟೆಡ್ ಕಾಮಗಾಗಿ 1.3 ರಿಂದ 1.9ಗೆ ವಿಸ್ತರಣೆಕ್ಕೆ ಅನುಮತಿ ನೀಡಲಾಗಿದೆ. ಇದಕ್ಕೆ ಬೇಕಾದ ಭೂಸ್ವಾಧೀನಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿದ್ದು, 2095 ಕೋಟಿ ವೆಚ್ಚದ ಯೋಜನೆಗೆ ಅನುಮತಿ ನೀಡಲಾಗಿದೆ ಎಂದರು.
ಬಳ್ಳಾರಿಯಲ್ಲಿ ಕ್ರಿಕೆಟ್ ಮೈದಾನ ನಿರ್ಮಾಣಕ್ಕೆ ಭೂಮಿ ನೀಡಿಕೆ ಮಾಡಲಾಗುತ್ತಿದೆ. 5 ಎಕರೆ, 14 ಎಕರೆ ಭೂಮಿ ನೀಡಲು ಒಪ್ಪಿಗೆ ನೀಡಲಾಗಿದೆ. ಲೀಸ್ ಆಧಾರದ ಮೇಲೆ ಭೂಮಿ ನೀಡಲು ಒಪ್ಪಿಗೆಯನ್ನು ನೀಡಿದೆ. ಪುತ್ತೂರಿನಲ್ಲಿ ಕ್ರಿಕೆಟ್ ಮೈದಾನಕ್ಕೆ ಭೂಮಿಗೆ 23 ಎಕರೆ ಭೂಮಿ ಲೀಸ್ ಮೇಲೆ ನೀಡಲು ಸಮ್ಮತಿಸಲಾಗಿದೆ ಎಂದು ಹೇಳಿದರು.
ಜಲಜೀವನ್ ಮಿಷನ್ ಯೋಜನೆ ಅನುಷ್ಠಾನಕ್ಕಾಗಿ ತೋರಣಗಲ್, ದರೋಜಿಗೆ 125 ಕೋಟಿ, ಅರಕಲಗೂಡಿಗೆ 94.71 ಕೋಟಿ, ಚಿಕ್ಕಮಗಳೂರು ತಾಲೂಕಿನ ಕುಡಿಯುವ ನೀರಿಗೆ 1025 ಕೋಟಿ, ಗುಡಿಬಂಡೆ ತಾಲೂಕಿನಲ್ಲಿ ಕುಡಿಯುವ ನೀರಿಗೆ 24 ಕೋಟಿ ಅನುದಾನ ನೀಡಲು ಸಂಪುಟ ಒಪ್ಪಿಗೆ ನೀಡಿದೆ ಎಂದರು.
ಅತ್ಯಾಚಾರ ತಡೆಗಟ್ಟಲು ಡಿವೈಸರ್ ಅಳವಡಿಕೆ ಮಾಡಲಾಗುತ್ತದೆ. ವೆಹಿಕಲ್ ಟ್ರಾಕಿಂಗ್ ಡಿವೈಸರ್ ಅಳವಡಿಕೆ ಮಾಡಲಿದ್ದೇವೆ. ಸಾರ್ವಜನಿಕ ವಾಹನಗಳಿಗೆ ಅಳವಡಿಸಲು ಸಮ್ಮತಿಯನ್ನು ಸಚಿವ ಸಂಪುಟ ನೀಡಿದೆ. 492 ಕೋಟಿ ಅನುದಾನ ನೀಡಲು ಸಮ್ಮತಿಸಲಾಗಿದೆ. ಕೇಂದ್ರದಿಂದ ನೀಡಲಾಗುವ ಅನುದಾನದಲ್ಲಿ ಉಪಯೋಗ ಮಾಡಲಾಗುತ್ತದೆ ಎಂದು ತಿಳಿಸಿದರು.
ವಿಶೇಷ ಹೂಡಿಕೆ ಅಧಿನಿಯಮಕ್ಕೆ ಒಪ್ಪಿಗೆಯನ್ನು ನೀಡಲಾಗಿದೆ. ಹೊಸ ವಿಧೇಯಕವನ್ನ ತರಲು ಹೊರಟಿದ್ದೇವೆ. ಮುಂದಿನ ಕ್ಯಾಬಿನೆಟ್ ನಲ್ಲಿ ಅಧಿಕೃತಗೊಳಿಸ್ತೇವೆ ಎಂದರು.
ಯಾದಗಿರಿ, ಬಾಗಲಕೋಟೆಯಲ್ಲಿ ತೀರ್ವ ನಿಗಾ ಘಟಕ ನಿರ್ಮಾಣ ಮಾಡಲಾಗುತ್ತದೆ. 262 ಹೊಸ ಆ್ಯಂಬುಲೆನ್ಸ್ ಖರೀದಿಗೆ ಒಪ್ಪಿಗೆ ನೀಡಲಾಗಿದ್ದು, 43.27 ಕೋಟಿ ಅನುದಾನಕ್ಕೆ ಒಪ್ಪಿಗೆ ನೀಡಲಾಗಿದೆ. ವೈದ್ಯಕೀಯ ಉಪಕರಣ ಖರೀದಿಗೆ 27 ಕೋಟಿ ಅನುದಾನ ನೀಡಲಾಗಿದೆ. ಆ್ಯಂಬುಲೆನ್ಸ್ ನಲ್ಲಿ ಅಳವಡಿಸುವ ಉಪಕರಣ ಖರೀದಿಸಲು ಒಟ್ಟು 98 ಕೋಟಿ ಅನುದಾನ ನೀಡಲು ಒಪ್ಪಿಗೆ ನೀಡಲಾಗಿದೆ ಎಂದರು.