ವಿಜಯಪುರ : ಯಶವಂತಪುರದ ಬಿಜೆಪಿ ಶಾಸಕ ಎಸ್‌ಟಿ ಸೋಮಶೇಖರ್ ಹಾಗೂ ಯಲ್ಲಾಪುರದ ಶಾಸಕ ಶಿವರಾಂ ಹೆಬ್ಬಾರ್ ಅವರನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಿದೆ. ಈ ವಿಚಾರವಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯೆ ನೀಡಿ ಎಸ್ ಟಿ ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ಅವರನ್ನು ರಕ್ಷಿಸಲು ಬಿಎ ವಿಜಯೇಂದ್ರ ಯತ್ನಿಸಿದ್ದರು ಎಂದು ಹೊಸ ಬಾಂಬ್ ಸಿಡಿಸಿದರು.
ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನನ್ನನ್ನು ಉಚ್ಚಾಟಿಸಿದಂತೆ ಎಸ್ ಟಿ ಸೋಮಶೇಖರ ಹಾಗೂ ಶಿವರಾಮ್ ಹೆಬ್ಬಾರ್ ಅವರನ್ನು ಉಚ್ಛಾಟಿಸಲಾಗಿದೆ. ಇವರಿಬ್ಬರನ್ನು ರಕ್ಷಿಸಲು ಬಿ.ವೈ ವಿಜಯೇಂದ್ರ ಬಹಳವಾಗಿ ಯತ್ನಿಸಿದ್ದರು. ಎಸ್ ಟಿ ಸೋಮಶೇಖರ್ ಹೆಬ್ಬಾರ್ ಬಿವೈ ವಿಜಯೇಂದ್ರಗೆ ಬಹಳ ಆತ್ಮೀಯರಾಗಿದ್ದರು. ಆದರೆ ಬಿ ವೈ ವಿಜಯೇಂದ್ರ ಪ್ರಯತ್ನ ವಿಫಲ ಆಗಿದೆ. ಕೇವಲ ಯತ್ನಾಳರನ್ನು ಹೊರಹಾಕಬೇಕು ಅಂತ ಪಿತೂರಿ ನಡೆಸಲಾಗಿತ್ತು. ಆದರೆ ಈಗ ಇಬ್ಬರನ್ನು ಉಚ್ಚಾಟಿಸಿದ ಕೇಂದ್ರೀಯ ಶಿಸ್ತು ಸಮಿತಿ ಬಿವೈ ವಿಜಯೇಂದ್ರಗೆ ಸಂದೇಶ ನೀಡಿದೆ.