ಬೆಂಗಳೂರು : ಬೆಂಗಳೂರಿನಲ್ಲಿ ನಂದಿನಿ ತುಪ್ಪ ಕಲಬೆರೆಕೆ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ಇದೀಗ ಕಿಂಗ್ ಪಿನ್ ದಂಪತಿಯನ್ನು ಬಂಧಿಸಿದ್ದಾರೆ.
ನಂದಿನಿ ತುಪ್ಪ ಕಲಬೆರೆಕೆ ಪ್ರಕರಣದಲ್ಲಿ ಗಂಡ, ಹೆಂಡತಿಯೇ ಕಿಂಗ್ ಪಿನ್ ಆಗಿದ್ದು, ಸಿಸಿಬಿ ಪೊಲೀಸರು ಇದೀಗ ದಂಪತಿ ಶಿವಕುಮಾರ್, ರಮ್ಯಾರನ್ನು ಬಂಧಿಸಿದ್ದಾರೆ.
ಸದ್ಯ ನಂದಿನಿ ತುಪ್ಪ ಕಲಬೆರೆಕೆ ಪ್ರಕರಣ ಸಂಬಂಧ ಆರೋಪಿಗಳಾದ ಶಿವಕುಮಾರ್ ಹಾಗೂ ರಮ್ಯಾಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ನಕಲಿ ನಂದಿನಿ ತುಪ್ಪ ತಯಾರಿ ಘಟಕದ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ತಮಿಳುನಾಡಿನಲ್ಲಿ ನಕಲಿ ತುಪ್ಪ ತಯಾರಿಕೆ ಘಟಕ ಹೊಂದಿದ್ದರು.








