ಬೆಂಗಳೂರು : ಮೇ 12 ರಂದು ಬುದ್ಧ ಪೂರ್ಣಿಮ ಹಿನ್ನೆಲೆಯಲ್ಲಿ ಪ್ರಾಣಿವಧೆ ಮತ್ತು ಮಾಂಸ ಮಾರಾಟವನ್ನು ಬಿಬಿಎಂಪಿ ನಿಷೇಧಿಸಿದೆ. ಸೋಮವಾರ ಬುದ್ಧ ಪೂರ್ಣಿಮೆ ಆಚರಣೆ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಮಂಗಳವಾರದಿಂದ ಎಂದಿನಂತೆ ಮಾಂಸ ಮಾರಾಟ ಮುಂದುವರಿಯಲಿದೆ.
ಹೌದು ಸೋಮವಾರದಂದು ಬುದ್ಧ ಪೂರ್ಣಿಮ ಆಚರಣೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ವ್ಯಾಪ್ತಿಯ ಕಸಾಯಿಖಾನೆಯಲ್ಲಿ ಪ್ರಾಣಿವಧೆ ಹಾಗೂ ಮಾರಾಟ ಮಳಿಗೆಗಳಲ್ಲಿ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಬಿಬಿಎಂಪಿ ಪಶುಪಾಲನೆ ವಿಭಾಗದ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ನಾಳೆ ಭಾನುವಾರ ಎಂದಿನಂತೆ ಕಾರ್ಯನಿರ್ಹಿಸಲಿದೆ. ಜೊತೆಗೆ ಸೋಮವಾರ ಬುದ್ಧ ಪೂರ್ಣಿಮೆ ದಿನವನ್ನು ಹೊರತುಪಡಿಸಿ ಮರುದಿನ ಅಂದರೆ ಮಂಗಳವಾರದಿಂದ ಎಂದಿನಂತೆ ಪಾಲಿಕೆ ವ್ಯಾಪ್ತಿಯಲ್ಲಿರುವ ಕಸಾಯಿ ಖಾನೆಗಳು ಕಾರ್ಯ ನಿರ್ವಹಿಸಲಿವೆ ಎಂದು ಪಾಲಿಕೆ ಅಧಿಕಾರಿ ತಿಳಿಸಿದ್ದಾರೆ.