ಬೆಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷರನ್ನು ಬದಲಾವಣೆ ಮಾಡಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಿವೈ ವಿಜಯೇಂದ್ರ ವಿರುದ್ಧ ಇತ್ತೀಚಿಗೆ ಸರಣಿ ವಾಗ್ದಾಳಿ ನಡೆಸಿದ್ದರು. ಬಳಿಕ ಹೈಕಮಾಂಡ್ ಒಂದು ಕಠಿಣ ಎಚ್ಚರಿಕೆ ನೀಡಿದ ಬಳಿಕ ಸೈಲೆಂಟಾಗಿದ್ದರು. ಇದೀಗ ಮತ್ತೆ ಬಿಎಸ್ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಯಡಿಯೂರಪ್ಪ ಲಿಂಗಾಯತ ಅಲ್ಲ, ಬಿಜೆಪಿಯ ಬ್ಲಾಕ್ ಮೇಲರ್ ಎಂದು ಮತ್ತೆ ಗುಡುಗಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ವೀರಶೈವ ಲಿಂಗಾಯತ ಎಂದು ಬೇರೆ ಯಡಿಯೂರಪ್ಪ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಯಡಿಯೂರಪ್ಪ ಲಿಂಗಾಯತ ಅಲ್ಲ ಬಿಜೆಪಿಯ ಬ್ಲಾಕ್ ಮೇಲರ್. ಯಡಿಯೂರಪ್ಪ ಬಿಜೆಪಿ ಹೈಕಮಾಂಡ್ ಅವರನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ತೀವ್ರ ವಾಗ್ದಾಳಿ ನಡೆಸಿದರು.
ಬಿ ಎಸ್ ವೈ ಕರೆದ ಯಾವುದೇ ಸಭೆಗಳಿಗೆ ಹೋಗಬೇಡಿ ಎಂದು ಹೇಳುತ್ತೇವೆ. ಬಿಎಸ್ ವೈ ಸಭೆಗೆ ವೀರಶೈವ ಲಿಂಗಾಯತರು ಹೋಗಬೇಡಿ ಎನ್ನುತ್ತೇವೆ.ವೀರಶೈವ ಲಿಂಗಾಯತರು ಪಂಚಮಸಾಲಿ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ. ಯಡಿಯೂರಪ್ಪ ಮತ್ತು ಪುತ್ರ ಬೀ ವೈ ವೀರೇಂದ್ರ ಅನ್ಯಾಯ ಮಾಡಿದ್ದಾರೆ. ಶಾಮನೂರು ಶಿವಶಂಕರಪ್ಪ ಕಾಂಗ್ರೆಸ್ ಪಕ್ಷದ ಬ್ಲಾಕ್ ಮೇಲರ್ ಆದರೆ ಯಡಿಯೂರಪ್ಪ ಬಿಜೆಪಿಯ ಬ್ಲಾಕ್ ಮೇಲರ್ ಎಂದರು.
ಮೊದಲಿಗೆ ಬಿಎಸ್ ಯಡಿಯೂರಪ್ಪ ಲಿಂಗಾಯತರೇ ಅಲ್ಲ. ಯಡಿಯೂರಪ್ಪ ಬಳೆಗಾರ ಶೆಟ್ಟರು ಯಾವುದೋ ಬೇರೆ ಕುಟುಂಬ ಬಿಎಸ್ ಯಡಿಯೂರಪ್ಪ ಹುಟ್ಟೂರು ಭೂಕನಕೆರೆಗೆ ಹೋಗಿ ಕೇಳಿದರೆ ಗೊತ್ತಾಗುತ್ತದೆ. ಯಡಿಯೂರಪ್ಪ ಯಾವ ಕುಟುಂಬದವರು ಎಂದು ಗೊತ್ತಾಗುತ್ತದೆ. ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಬೂಕನಕೆರೆ ಗ್ರಾಮಕ್ಕೆ ಹೋಗಿ ಕೇಳಿದರೆ ಯಾವ ಸಮುದಾಯ ಎಂದು ತಿಳಿಯುತ್ತೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಹೇಳಿಕೆ ನೀಡಿದರು.