ಬೆಂಗಳೂರು : ಜೈಲಿನಲ್ಲಿ ಅಣ್ಣನನ್ನು ನೋಡಲು ಹೋಗಿ ತಮ್ಮನೊಬ್ಬ ಲಾಕ್ ಆದ ಪ್ರಕರಣ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆದಿದೆ. ಅಣ್ಣನನ್ನು ನೋಡಲು ತೆರಳಿದ್ದ ವೇಳೆ ಆರೋಪಿ ಅಪ್ರೋಜ್ ಪಾಷಾ ಪೊಲೀಸರ ಅತಿಥಿಯಾಗಿದ್ದಾನೆ.
ಜೈಲಿನಲ್ಲಿ AI ಕ್ಯಾಮೆರಾದಿಂದ ಡಕಾಯಿತಿ ಕೇಸ್ ನಲ್ಲಿ ಅಪ್ರೋಜ್ ಲಾಕ್ ಆಗಿದ್ದಾನೆ. ಕಳೆದ 10 ವರ್ಷದ ಹಿಂದೆ ಡಕಾಯಿತ್ ಕೇಸ್ನಲ್ಲಿ ಅಪ್ರೋಜ್ ಜೈಲು ಸೇರಿದ್ದ. ಜಾಮೀನಿನ ಮೇಲೆ ಆರೋಪಿ ಅಪ್ರೋಜ್ ಪಾಷಾ ಹೊರಗಡೆ ಇದ್ದ ಕೇಸ್ ಟ್ರಯಲ್ ವೇಳೆ ಕೋರ್ಟಿಗೆ ಹಾಜರಾಗದೆ ಆತ ಕಳ್ಳಾಟ ನಡೆಸಿದ್ದಾನೆ. ಆಫ್ರೋಜ್ ಪಾಷಾ ಬಂಧನಕ್ಕೆ ಹಲವಾರು ಬಾರಿ ವಾರೆಂಟ್ ನೀಡಿತ್ತು. ಇದೀಗ ಆತನನ್ನು ಬಂಧಿಸಲಾಗಿದೆ.