ಬೆಂಗಳೂರು : ದುಬೈ ನಿಂದ ಅಕ್ರಮವಾಗಿ ಚಿನ್ನ ಸಾಗಾಟಾ ಪ್ರಕರಣದಲ್ಲಿ ನಟಿ ರನ್ಯಾ ರಾವ್ ಇದೀಗ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಪಿಡಬ್ಲ್ಯೂಡಿ ಸಚಿವ ಸತೀಶ್ ಜಾರಕಿಹೊಳಿ ಅವರು ಪ್ರತಿಕ್ರಿಯೆ ನೀಡಿದ್ದು ವಿದೇಶಗಳಿಂದ ಚಿನ್ನ ತರುವುದು ಹಾಗೂ ಡ್ರಗ್ಸ್ ತರುವುದು ಹೊಸದೇನಲ್ಲ ಬಿಡಿ. ಈ ಕುರಿತು ಕೇಂದ್ರದ ಇಂಟಲಿಜೆನ್ಸ್ ಸಂಸ್ಥೆ ಇದೆ ತನಿಖೆ ನಡೆಸುತ್ತಿದೆ 15 ದಿನದಲ್ಲಿ ಎಲ್ಲವೂ ಹೊರ ಬರಲಿದೆ ಎಂದು ತಿಳಿಸಿದರು.
ಬೆಂಗಳೂರಲ್ಲಿ ಮಾತನಾಡಿದ ಅವರು, ಚಿನ್ನ ತರೋದು ಡ್ರಗ್ಸ್ ತರೋದು ಹೊಸದೇನು ಅಲ್ಲ. ಫೋನ್ ಮಾಡಿ ಬಿಡಿ ಅಂತ ನಾವು ಹೇಳುತ್ತೇವೆ. ಬಿಜೆಪಿಯವರು ಹೇಳುತ್ತಾರೆ. ಇಂತಹ ಪ್ರಕರಣದಲ್ಲಿ ರಾಜಕಾರಣಿ ಅಧಿಕಾರಿಗಳ ಮಕ್ಕಳು ಸಿಕ್ಕಿದ್ದಾರೆ ಎಂದು ಬೆಂಗಳೂರಿನಲ್ಲಿ ಸಚಿವ ಸತೀಶ್ ಜಾರಕಿಹೊಳಿ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ರಾಜಕಾರಣಿ ಮಕ್ಕಳಿ ಅಧಿಕಾರಿಗಳ ಮಕ್ಕಳು ಇರೋದು ಸಹ ಹೊಸದಲ್ಲ. ಇನ್ನು 15 ದಿನ ಕಾಯಿರಿ ಎಲ್ಲವೂ ಹೊರಗಡೆ ಬರುತ್ತದೆ. ಕಾನೂನಲ್ಲಿ ಏನು ಶಿಕ್ಷೆ ಇದೆ ಅದು ಆರೋಪಿಗಳಿಗೆ ಆಗೇ ಆಗುತ್ತದೆ. ರಾಜಕಾರಣಿ ಮಕ್ಕಳು ಅಧಿಕಾರಿ ಮಕ್ಕಳು ಸ್ಮಗ್ಲಿಂಗ್ ಮಾಡುವುದರಲ್ಲಿ ಸಾಕಷ್ಟು ಜನ ಸಿಕ್ಕಿದ್ದಾರೆ. ಅವರು ಮಾಡಿರಬಹುದು ಆದರೆ ನಮ್ಮ ಪಕ್ಷಕ್ಕೆ ಅದು ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದರು.