ಬೆಂಗಳೂರು : ಬೆಂಗಳೂರಲ್ಲಿ ಇದೀಗ ವರುಣ ಅಬ್ಬರಿಸುತ್ತಿದ್ದು, ಕಳೆದ ಎರಡು ದಿನಗಳಿಂದ ಬೆಂಗಳೂರು ಮಹಾನಗರದಲ್ಲಿ ಭಾರಿ ಮಳೆ ಆಗುತ್ತಿದೆ. ನಿನ್ನೆ ರಾತ್ರಿಯಿಂದ ಎಡೆಬಿಡದೆ ಮಳೆ ಸುರಿಯುತ್ತಿದ್ದು ಬೆಂಗಳೂರಿನ ಕೆಲವು ರಸ್ತೆಗಳು ಸಂಪೂರ್ಣ ನದಿಯಂತಾಗಿವೆ. ಇದೀಗ ಬೆಂಗಳೂರಿನ ಸಿಲ್ಕ್ ಬೋರ್ಡ್ ಜಂಕ್ಷನ್ ನಲ್ಲಿ ಬಿಎಂಟಿಸಿ ಬಸ್ ಒಂದು ಕೆಟ್ಟು ಹೋಗಿ ನಿಂತಿರುವ ಘಟನೆ ವರದಿಯಾಗಿದೆ.
ಹೌದು ಬೆಂಗಳೂರಿನ ಸಿಲ್ಕ್ ಬೋರ್ಡ್ ಜಂಕ್ಷನ್ ನಲ್ಲಿ ರಸ್ತೆ ಮಧ್ಯೆ ಬಿಎಂಟಿಸಿ ಬಸ್ ಸಿಲುಕಿದೆ. ರಸ್ತೆ ಮಧ್ಯೆಯೇ ಬಿಎಂಟಿಸಿ ಬಸ್ ಕೆಟ್ಟು ನಿಂತಿದೆ. ಈ ವೇಳೆ ಕಿಟಕಿ ಮೂಲಕ ಪ್ರಯಾಣಿಕರನ್ನು ರಕ್ಷಣೆ ಮಾಡಲಾಗಿದೆ. ಇದೆ ವೇಳೆ ಆಸ್ಪತ್ರೆಗೆ ತೆರಳಿ ಮನೆಗೆ ವಾಪಾಸಾಗುತ್ತಿದ್ದ ಗರ್ಭಿಣಿ ಮಹಿಳೆಯನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಜೆಸಿಬಿ ಮೂಲಕ ಬಸ್ ಸೈಡ್ ಗೆ ಹಾಕಿ ಗರ್ಭಿಣಿಯನ್ನು ರಕ್ಷಣೆ ಮಾಡಲಾಗಿದೆ.
ಬೆಂಗಳೂರಲ್ಲಿ ಭಾರಿ ಮಳೆ ಆಗುತ್ತಿರುವುದರಿಂದ ಇದೀಗ ರಸ್ತೆಗಳು ಸಂಪೂರ್ಣವಾಗಿ ನದಿಯಂತೆ ಆಗಿವೆ. ಈ ವೇಳೆ ಬೆಂಗಳೂರಿನ ಸಿಲ್ಕ್ ಬೋರ್ಡ್ ಜೆಂಕ್ಷನ್ ನಲ್ಲಿ ಬಿಎಂಟಿಸಿ ಬಸವ ನೀರಿನ ಮಧ್ಯೆ ಕೆಟ್ಟು ನಿಂತಿದೆ.ಈ ವೇಳೆ ಪ್ರಯಾಣಿಕರನ್ನು ಡ್ರೈವರ್ ಸೀಟಿನ ಮೂಲಕ ರಕ್ಷಣೆ ಮಾಡಲಾಯಿತು. ಇದೇ ವೇಳೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿ ಒಬ್ಬರು ಸಹ ಇದ್ದರು. ಈ ವೇಳೆ ತಕ್ಷಣ ಜೆಸಿಬಿ ಮೂಲಕ ಬಸ್ ಸೈಡ್ ಗೆ ಹಾಕಿ ಪೊಲೀಸರು ಜೆಸಿಬಿ ಮೂಲಕ ಗರ್ಭಿಣಿ ಮಹಿಳೆಯನ್ನು ರಕ್ಷಿಸಿದ್ದಾರೆ.