ಬೆಂಗಳೂರು : ಮೆಟ್ರೋ ಕಾಮಗಾರಿಯ ಹೆಸರಲ್ಲಿ? ಮರಗಳ ಮಾರಣ ಹೋಮ ನಡೆಯುತ್ತಿದೆ. ಬೆಂಗಳೂರಿನ ಪರಿಸರಕ್ಕೆ ಬಹುದೊಡ್ಡ ಗಂಡಾಂತರ ಇದೀಗ ಕಾದಿದೆ. ಮೆಟ್ರೋದ ಮೂರನೇ ಹಂತದ ಕಾಮಗಾರಿಗೆ 6,868 ಮರ ಕಡಿಯಲು ಇದೀಗ ನಿರ್ಧರಿಸಲಾಗಿದೆ. ಮೆಟ್ರೋ ಯೋಜನೆಗೆ ಪರಿಸರ ಪ್ರೇಮಿಗಳು ಕಿಡಿ ಕಾರಿದ್ದಾರೆ. ಮೂರನೇ ಹಂತದ ಕಾಮಗಾರಿಗೆ ಮುಂದಾಗಿದೆ.
ಬರೋಬ್ಬರಿ 37.12 ಕಿಲೋಮೀಟರ್ ಡಬಲ್ ಡೆಕ್ಕರ್ ಮೆಟ್ರೋ ಯೋಜನೆ ಇದಾಗಿದ್ದು ಜೂನ್ ನಲ್ಲಿ 3ನೇ ಹಂತದ ಕಾಮಗಾರಿ ಆರಂಭವಾಗಲಿದ್ದು ಮೈಸೂರು ರಸ್ತೆಯಿಂದ ಜೆಪಿ ನಗರದ ವರೆಗೆ ಮೆಟ್ರೋ ವಿಸ್ತರಣೆ ಮಾಡಲಾಗಿದೆ. ಜೆಪಿ ನಗರದ ಭಾಗದಲ್ಲಿ ಸಾವಿರದ 1092 ತೆರವಿಗೆ ನಿರ್ಧಾರ ಮಾಡಿದ್ದು ಅದರಲ್ಲಿ 406 ಮರಗಳ ಸ್ಥಳಾಂತರಕ್ಕೆ ಬಿ ಎಂ ಆರ್ ಸಿ ಎಲ್ ಪ್ಲಾನ್ ಮಾಡಿಕೊಂಡಿದೆ.
ಮರಗಳ ನಾಶದಿಂದ ವಾಯುಮಾಲಿನ್ಯ ಹೆಚ್ಚಾಗುವ ಆತಂಕ ಹೆಚ್ಚಾಗಿದ್ದು ದೆಹಲಿ ಮಾದರಿಯಲ್ಲಿ ವಾಯುಮಾಲಿನ್ಯ ಹೆಚ್ಚು ಆಗುವ ಸಂಭವವಿದೆ. ಅಭಿವೃದ್ಧಿ ಹೆಸರಲ್ಲಿ ಮರಗಳ ಮಾರಣ ಹೋಮಕ್ಕೆ ಬಿಎಮ್ಆರ್‌ಸಿಎಲ್ ಸಜ್ಜಾಗಿರುವುದರಿಂದ ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರಿಸರವಾದಿ ಸುರೇಶ್ ಅವರು ಮಾತನಾಡಿ ಅಭಿವೃದ್ಧಿ ಬೇಕು ಆದರೆ ಈ ಒಂದು ಅಭಿವೃದ್ಧಿ ಹೆಸರಲ್ಲಿ ಮರಗಳ ಮಾರಣಹೋಮ ಮಾಡುತ್ತಿರುವುದರಿಂದ ಮುಂಬರುವ ದಿನಗಳಲ್ಲಿ ಬೆಂಗಳೂರು ಸಹ ದೆಹಲಿ ಮಾದರಿಯಲಿ ವಾಯುಮಾಲಿನ್ಯ ಆಗುವ ಸಾಧ್ಯತೆ ಇದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.








