ಬೆಳಗಾವಿ : ಇದು ಬೆಲೆ ಏರಿಕೆ ವಿರೋಧಿಸಿ ಬೆಳಗಾವಿಯಲ್ಲಿ ಕಾಂಗ್ರೆಸ್ ಪ್ರತಿಭಟನಾ ಸಮಾವೇಶ ಹಮ್ಮಿಕೊಂಡಿದ್ದು ಈ ಒಂದು ಸಮಾ ವೇಷದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಷಣ ಮಾಡುವ ಸಂದರ್ಭದಲ್ಲಿ ಬಿಜೆಪಿ ಮಹಿಳಾ ಕಾರ್ಯಕರ್ತರು ಸಿಎಂ ಸಿದ್ದರಾಮಯ್ಯ ಗೆ ಕಪ್ಪು ಬಾವುಟ ಪ್ರದರ್ಶಿಸಿ ಕೆಲಕಾಲ ಸಿಎಂ ಭಾಷಣಕ್ಕೆ ಅಡ್ಡಿಪಡಿಸಿದರು ದಕ್ಷಿಣ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡು ಬೆಳಗಾವಿಯ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು ಇದೀಗ ಕೋರ್ಟ್ ಆರು ಜನ ಬಿಜೆಪಿ ಕಾರ್ಯಕರ್ತರಿಗೆ ಜಾಮೀನು ಮಂಜೂರು ಮಾಡಿದೆ.
ಹೌದು ಇಂದು ಸಿಎಂ ಸಿದ್ದರಾಮಯ್ಯಗೆ ಬಿಜೆಪಿ ಮಹಿಳಾ ಕಾರ್ಯಕರ್ತೆಯರು ಕಪ್ಪು ಬಾವುಟ ಬ್ರದರ್ ಸಿಸಿದ್ದರು ತಕ್ಷಣ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡರು. ಇದೀಗ ಕಪ್ಪು ಬಾವುಟ ಪ್ರದರ್ಶಿಸಿದ ಆರು ಮಹಿಳೆಯರಿಗೆ ಜಾಮೀನು ಬಿಜೆಪಿ ಕಾರ್ಯಕರ್ತೆರಿಗೆ ಬೆಳಗಾವಿ ಕೋರ್ಟಿನಿಂದ ಇದೀಗ ಜಾಮೀನು ಮಂಜೂರು ಮಾಡಲಾಗಿದೆ. ಬೆಳಗಾವಿ ಜಿಲ್ಲಾ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷ ಶಿಲ್ಪಾ ಕೇಕಾರೆ, ಪವಿತ್ರ ಹಿರೇಮಠ, ಸುಮಿತ್ರ ಜಾಲಗಾರ, ರೇಷ್ಮಾ ಬಾರಮುತೆ, ಅನ್ನಪೂರ್ಣ ಹಾವಳ ಹಾಗು ಮಂಜುಳಾ ಹನಿಕೇರಿಗೆ ಇದೀಗ ಬೆಳಗಾವಿ ಕೋರ್ಟ್ ಜಾಮೀನು ನೀಡಿದೆ.