ಬೆಂಗಳೂರು : ಕೊಡುಗು ಜಿಲ್ಲೆ ಮೂಲದ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಅತ್ಮಹತ್ಯೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಹೆಣ್ಣೂರು ಠಾಣೆ ಪೊಲೀಸರು, ಇತ್ತೀಚಿಗೆ ಮೃತನ ಮೊಬೈಲ್ ಹಾಗೂ ಡೆತ್‌ನೋಟ್‌ಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದ್ದರು. ಇದೀಗ ಮೃತ ವಿನಯ್ ಅವರ ಮರಣೋತ್ತರ ಪರೀಕ್ಷೆಯ ಹೆಣ್ಣೂರು ಪೊಲೀಸರ ಕೈಗೆ ಸೇರಿದೆ.
ಹೌದು ಬಿಜೆಪಿ ಕಾರ್ಯಕರ್ತ ವಿನಯ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರ ಕೈಗೆ ಮರಣೋತ್ತರ ಪರೀಕ್ಷೆ ವರದಿ ವರದಿ ಸೇರಿದೆ. ಪ್ರಕರಣದ ಪರಿಶೀಲನೆಯ ನಡೆಸುತ್ತಿರುವ ಹೆಣ್ಣೂರು ಪೊಲೀಸರು ಈ ವರದಿಯನ್ನು ವಿಶ್ಲೇಷಣೆಗೆ ಒಳಪಡಿಸಿದ್ದಾರೆ. ವಿನಯ್ ಸಾವನ್ನಪ್ಪಿದ ನಿಖರವಾದ ಸಮಯ ಯಾವುದು? ವಿನಯ್ ಮೃತ ದೇಹದ ಸ್ಥಿತಿ ಹೇಗಿತ್ತು? ವಿನಯ್ ಮಾಡಿದ ವಾಟ್ಸಾಪ್ ಡೆತ್ ನೋಟ್ ಸಮಯ ಕೂಡ ಪರಿಶೀಲನೆ ಮಾಡಲಿದ್ದಾರೆ. ಅಲ್ಲದೆ ಸಾವನ್ನಪ್ಪಿದ ಸಮಯದ ಬಗ್ಗೆಯೂ ಪೊಲೀಸರು ಪರಿಶೀಲಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಕರಣದ ಹಿನ್ನೆಲೆ
ಆತ್ಮಹತ್ಯೆಗೆ ಶರಣಾದ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಪತ್ನಿ ಮತ್ತು ಮಗುವಿನ ಜತೆಗೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನೆಲೆಸಿದ್ದರು. ನಾಗವಾರದ ಎಚ್‌ಬಿಆರ್ ಲೇಔಟ್‌ನ ಖಾಸಗಿ ಕಂಪನಿಯಲ್ಲಿ ಆಪರೇಷನ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ವಿನಯ್ ಶುಕ್ರವಾರ ಮುಂಜಾನೆ ಸುಮಾರು 4.30ಕ್ಕೆ ತಾನು ಕೆಲಸ ಮಾಡುವ ಕಂಪನಿಯ ಗೋದಾಮಿನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ಮೃತನ ಸಹೋದರ ಜೀವನ್ ನೀಡಿದ ದೂರಿನ ಮೇರೆಗೆ ಹೆಣ್ಣೂರು ಠಾಣೆ ಪೊಲೀಸರು ತೆನ್ನೀರಾ ಮೆಹೀನಾ ಸೇರಿ ಇತರರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ, ಬೆದರಿಕೆ, ಕಿರುಕುಳ ಆರೋಪದಡಿ ಎಫ್‌ಐಆರ್ ದಾಖಲಿಸಿದ್ದರು.