ವಿಜಯಪುರ : ಹಿಂದುತ್ವದಿಂದ ದೂರ ಸರಿದ ಪಕ್ಷವನ್ನು ಹಿಂದುತ್ವದತ್ತ ತರುತ್ತೇವೆ. ನಮಗೆ ಪ್ರಧಾನಿ ನರೇಂದ್ರ ಮೋದಿ ಮೇಲೆ ಮತ್ತು ಬಿಜೆಪಿ ಮೇಲೆ ವಿಶ್ವಾಸವಿದೆ. ಬಿಎಸ್ ಯಡಿಯೂರಪ್ಪ ಮತ್ತು ವಿಜಯೇಂದ್ರ ಮೇಲೆ ನಮಗೆ ಯಾವುದೇ ವಿಶ್ವಾಸವಿಲ್ಲ. ಮಹಾರಾಷ್ಟ್ರ, ಉತ್ತರ ಪ್ರದೇಶ, ಅಸ್ಸಾಂ, ಮಧ್ಯಪ್ರದೇಶ ಹಾಗೂ ರಾಜಸ್ಥಾನ, ದೆಹಲಿಯಲ್ಲಿ ಹಿಂದುತ್ವದ ಮೂಲಕ ಪಕ್ಷ ಗೆದ್ದಿದೆ. ಕರ್ನಾಟಕದಲ್ಲೂ ಹಿಂದುತ್ವದ ಆಧಾರದ ಮೇಲೆ ಪಕ್ಷ ಗೆಲ್ಲುತ್ತದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದರು.
ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯಾವುದೇ ಹೊಸ ಪಕ್ಷ ಕಟ್ಟಲ್ಲ. ಈಗಿರುವ ಪಕ್ಷದಲ್ಲೇ ರಿಪೇರಿ ಮಾಡಬೇಕಾಗಿದೆ. ಯಾವ ಕಾಲಕ್ಕೂ ಬಿಜೆಪಿ ಬಿಡಲ್ಲ. ಹಿಂದುತ್ವದ ನಾಯಕರನ್ನು ಹೈಕಮಾಂಡ್ ಆಯ್ಕೆ ಮಾಡುತ್ತದೆ. ಮಹಾರಾಷ್ಟ್ರ, ಉತ್ತರ ಪ್ರದೇಶ, ಅಸ್ಸಾಂ,ಮಧ್ಯಪ್ರದೇಶ ಹಾಗೂ ರಾಜಸ್ಥಾನ, ದೆಹಲಿಯಲ್ಲಿ ಹಿಂದುತ್ವದ ಮೂಲಕ ಪಕ್ಷ ಗೆದ್ದಿದೆ. ಕರ್ನಾಟಕದಲ್ಲೂ ಹಿಂದುತ್ವದ ಆಧಾರದ ಮೇಲೆ ಪಕ್ಷ ಗೆಲ್ಲುತ್ತದೆ ಎಂದು ತಿಳಿಸಿದರು.
ಹೈಕಮಾಂಡ್ ಖಡಕ್ ಸೂಚನೆ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸೈಲೆಂಟಾಗಿದ್ದ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇದೀಗ ಮತ್ತೆ ಬಿಎಸ್ ಯಡಿಯೂರಪ್ಪ ಹಾಗೂ ಅವರ ಮಗನ ವಿರುದ್ಧ ವಾಗ್ದಾಳಿ ಮಾಡಿದ್ದು, ರಾಜ್ಯಾಧ್ಯಕ್ಷರ ಬದಲಾವಣೆ ಕುರಿತು ಪ್ರತಿಕ್ರಿಯೆ ನೀಡಿದ ಅವರು ರಾಜ್ಯಾಧ್ಯಕ್ಷರ ಬದಲಾವಣೆ ಆಗೇ ಆಗುತ್ತದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭವಿಷ್ಯ ನುಡಿದಿದ್ದಾರೆ.
ರಾಜ್ಯ ಬಿಜೆಪಿ ಅಧ್ಯಕ್ಷರ ಬದಲಾವಣೆ ಆಗೇ ಆಗುತ್ತದೆ ಯಾರೇ ರಾಜ್ಯಾಧ್ಯಕ್ಷರಾಗಲಿ ಗಟ್ಟಿಯಾಗಿ ಮಾತಾಡುವವರಾಗಲಿ. ವೀರಶೈವ ಲಿಂಗಾಯತ ನಾಯಕರೆಂದರೆ ಪೂಜ್ಯ ತಂದೆಯವರು ಪೂಜೆ ತಂದೆಯವರ ಮಗನನ್ನು ತೆಗೆದರೆ ಪಕ್ಷ ಮುಗಿಯುತ್ತೆ ಅಂದರು. ಬಿಜೆಪಿ ಮುಗಿದು ಹೋಗುತ್ತದೆ ಎಂದು ಹವಾ ಎಬ್ಬಿಸಿದರು. ಬಿಜೆಪಿ ಹಿಂದುತ್ವದ್ದಾಗಿದೆ. ಸಮಸ್ತ ಹಿಂದೂಗಳ ರಕ್ಷಣೆ ಮಾಡುವ ನಾಯಕ ಬೇಕಾಗಿದೆ. ಲಿಂಗಾಯತ ಎಂದು ಸೀಮಿತವಾದರೆ ನೀವು ಅಲ್ಲೇ ಕೂರುತ್ತೀರಿ ಎಂದರು.
ವಿಜಯಪುರ ಜಿಲ್ಲಾಧ್ಯಕ್ಷರ ಆಯ್ಕೆ ವಿಚಾರವಾಗಿ ಶಾಸಕ ಯತ್ನಾಳ ವ್ಯಂಗ್ಯವಾದಿದ್ದಾರೆ. ವಿಜಯೇಂದ್ರ ಆಪ್ತ ಗುರುಲಿಂಗಪ್ಪ ಅಂಗಡಿ ನೇಮಕಕ್ಕೆ ವ್ಯಂಗ್ಯವಾಡಿದ್ದಾರೆ. ಬಿ.ವೈ ವಿಜಯೇಂದ್ರ ಏನು ಬೇಕಾದರೂ ಮಾಡಿಕೊಳ್ಳಲಿ. ವಿಜಯೇಂದ್ರ ಅವರಪ್ಪನೂ ಹೀಗೆ ಮಾಡುತ್ತಾ ಬಂದ. ನಮ್ಮ ವಿರುದ್ಧ ಇರುವವರನ್ನೇ ನೇಮಕ ಮಾಡುವ ಚಟವಿದೆ. ವಿಜೇಂದ್ರ ವಿಜಾಪುರಕ್ಕೆ ಬರಲಿ ಎಂದು ವಿಜಯೇಂದ್ರ ಯಡಿಯೂರಪ್ಪ ವಿರುದ್ಧ ಮತ್ತೆ ಶಾಸಕ ಯತ್ನಾಳ್ ಗುಡುಗಿದ್ದಾರೆ.
ರನ್ಯಾ ಕೇಸ್ ‘CBI’ ಗೆ ವಹಿಸಿ
ರನ್ಯಾ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣವನ್ನು ಸಿಬಿಐಗೆ ವಹಿಸಿ ಪ್ರಕರಣದ ಹಿಂದೆ ದೊಡ್ಡ ಜಾಲವಿದೆ. ಇದರಲ್ಲಿ ಸಚಿವರು ಹಾಗೂ ಪೊಲೀಸ್ ಅಧಿಕಾರಿಗಳು ಭಾಗಿಯಾಗಿರಬಹುದು ನಟಿ ರನ್ಯಾ ರಾವ್ ಗೆ ಪೊಲೀಸ್ ಅಧಿಕಾರಿಗಳೇ ರಕ್ಷಣೆ ಕೊಡುತ್ತಿದ್ದರು. ರಾಜ್ಯ ಸರ್ಕಾರದಿಂದ ನ್ಯಾಯ ಸಿಗಲ್ಲ ಪ್ರಕರಣ ಸಿಬಿಐಗೆ ವಹಿಸಿದರೆ ನ್ಯಾಯ ಸಿಗುತ್ತದೆ ಅಧಿಕಾರಿಗಳು ರಾಜಕಾರಣಿಗಳು ಯಾರೇ ಇದ್ದರೂ ಕ್ರಮ ಆಗಲಿ ಎಂದು ಅವರು ಅಗ್ರಹಿಸಿದರು.