ಚಿಕ್ಕಮಗಳೂರು : ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕುರಿತು ಅವಾಚ್ಯ ಪದ ಬಳಸಿದ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಬಿಜೆಪಿ ಸದಸ್ಯ ಸಿಟಿ ರವಿ ಅವರನ್ನು ಬಂಧಿಸಲಾಗಿದೆ. ಹೀಗಾಗಿ ನಾಳೆ ಚಿಕ್ಕಮಗಳೂರು ನಗರ ಬಂದ್ ಮಾಡಲು ಬಿಜೆಪಿ ಸಿದ್ಧತೆ ಮಾಡಿಕೊಂಡಿದೆ. ಈ ಕುರಿತು ಇಂದು ಸಿಟಿ ರವಿ ನಿವಾಸದಲ್ಲಿ ಬಿಜೆಪಿ ಕಾರ್ಯಕರ್ತರು ಸಭೆ ನಡೆಸಿದರು. ಸಭೆಯ ಬಳಿಕ ಬಂದ್ ಬಗ್ಗೆ ಬಿಜೆಪಿ ಮುಖಂಡರು ಖಚಿತಪಡಿಸಿದ್ದಾರೆ.
ಇನ್ನೂ ಇದೆ ವಿಚಾರವಾಗಿ ಬೆಳಗಾವಿಯ ಖಾಸಗಿ ಹೋಟೆಲ್ ನಲ್ಲಿ ಬಿಜೆಪಿ ನಾಯಕರು ಚರ್ಚೆ ನಡೆಸಿದ್ದು, ವಿರೋಧ ಪಕ್ಷದ ನಾಯಕ ಆರ್ ಅಶೋಕ್, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಪರಿಷತ್ ಉಪನಾಯಕ ಅರವಿಂದ್ ಬೆಲ್ಲದ್ ಹಾಗೂ ಎಂಎಲ್‌ಸಿ ಎನ್ ರವಿ ಕುಮಾರ್ ಚರ್ಚೆ ಮಾಡಿದ್ದಾರೆ. ಸಿಟಿ ರವಿ ಬಂಧನಾ ಕುರಿತು ಎಲ್ಲಾ ಬಿಜೆಪಿ ಮುಖಂಡರು ಚರ್ಚಿಸಿದ್ದಾರೆ. ಬಳಿಕ ಸಿಟಿ ರವಿ ಭೇಟಿಗೆ ಎಲ್ಲಾ ನಾಯಕರು ಖಾನಾಪುರದತ್ತ ತೆರಳಿದರು.