ಕಲಬುರ್ಗಿ : ಬೀದರ್ ನಲ್ಲಿ ಗುತ್ತಿಗೆದಾರ ಸಚಿನ್ ಪಂಚಾಳ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ವಿಪಕ್ಷ ಬಿಜೆಪಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದು, ಸಚಿವ ಪ್ರಿಯಾಂಕ ಖರ್ಗೆ ಅವರ ರಾಜೀನಾಮೆಗೆ ಆಗ್ರಹಿಸಿ ಎಂದು ಕಲಬುರ್ಗಿಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ.
ಈಗಾಗಲೇ ಕಲಬುರ್ಗಿ ನಗರಕ್ಕೆ ರಾಜ್ಯ ಬಿಜೆಪಿ ನಾಯಕರು ಆಗಮಿಸಿದ್ದು ಕಲ್ಬುರ್ಗಿ ನಗರದಲ್ಲಿರುವ ಖರ್ಗೆ ನಿವಾಸಕ್ಕೆ ಮುತ್ತಿಗೆ ಹಾಕಲು ಬಿಜೆಪಿ ನಾಯಕರು ಪ್ಲಾನ್ ಮಾಡಿದ್ದಾರೆ. ಆದರೆ ಇದಕ್ಕೆ ಕೌಂಟರ್ ಕೊಡಲು ಕಾಂಗ್ರೆಸ್ ಕಾರ್ಯಕರ್ತರು ಕೂಡ ಸಜ್ಜಾಗಿದ್ದು ಕಲಬುರ್ಗಿ ನಗರಕ್ಕೆ ಪ್ರತಿಭಟನೆ ಮಾಡಲು ಆಗಮಿಸಿದ ಬಿಜೆಪಿ ನಾಯಕರಿಗೆ ಕಾಂಗ್ರೆಸ್ ಕಾರ್ಯಕರ್ತರು ಎಳನೀರು, ಮಜ್ಜಿಗೆ, ಜ್ಯೂಸ್ ಹಾಗೂ ಚಹಾ ಕಾಫಿ ವ್ಯವಸ್ಥೆ ಮಾಡಿ ಕೌಂಟರ್ ನೀಡಲು ಸಜ್ಜಾಗಿದ್ದಾರೆ.
ನಗರದ ಜಗತ್ ವಿರುದ್ಧ ದಿಂದ ಎಸ್ ವಿ ಪಿ ವಿರುದ್ಧದ ವರೆಗೆ ಬೃಹತ್ ಪ್ರತಿಭಟನೆ ನಡೆಯಲಿದೆ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಸಂಚಾರ ನಿರ್ಭಂಧಿಸಲಾಗಿದ್ದು, ಬೇರೆ ರಸ್ತೆ ಮೂಲಕ ತೆರಳುವಂತೆ ವಾಹನ ಸವಾರರಿಗೆ ಸೂಚನೆ ನೀಡಲಾಗಿದೆ. ಕಲ್ಬುರ್ಗಿ ನಗರದ ಐವಾನ್ ಈ ಶಾಹಿಯಲ್ಲಿ ಖರ್ಗೆ ನಿವಾಸದ ಬಳಿ ಬಿಗಿ ಪೊಲೀಸ್ ಬಂದೋಬಸ್ ಮಾಡಲಾಗಿದ್ದು, ಖರ್ಗೆ ನಿವಾಸಕ್ಕೆ ವಿಗಿ ಭದ್ರತೆ ಒದಗಿಸಲಾಗಿದೆ.