ಬೆಂಗಳೂರು : ಗ್ಯಾರಂಟಿ ಯೋಜನೆಗಳಿಗೆ SEP-TSP ಹಣವನ್ನು ಬಳಸಲಾಗುತ್ತಿದೆ ಎಂದು ಕಳೆದ ಹಲವು ದಿನಗಳಿಂದ ಬಿಜೆಪಿ ರಾಜ್ಯ ಕಾಂಗ್ರೆಸ್ ಸರ್ಕಾರ ವಿರುದ್ಧ ಆರೋಪ ಮಾಡಿದ್ದು, ಈ ವಿಚಾರವಾಗಿ ಇಂದು ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಕುರಿತು ಚರ್ಚೆ ನಡೆಸಲಾಯಿತು ಈ ಕುರಿತು ವಿಪಕ್ಷ ನಾಯಕ ಆರ್ ಅಶೋಕ್ ಮಾತನಾಡಿದರು.
ಕಾಡಿನಲ್ಲಿ ಪ್ರಾಣಿಗಳನ್ನು ಕಾಯುವ ಜನರಿಗೆ ಎಸ್ ಸಿ, ಎಸ್ ಟಿ ಹಣ ಬಳಸಿದ್ದಾರೆ ಎಂದು ಅಶೋಕ್ ಹೇಳಿದಾಗ ಅಲ್ಲಿ ಎಸ್ ಸಿ ಎಸ್ ಟಿ ಸಮುದಾಯದವರಿದ್ದಾರೆ ಹಾಗಾಗಿ ಅವರಿಗೆ ಕೊಟ್ಟಿದ್ದಾರೆ ಎಂದು ಸ್ಪೀಕರ್ ಯುಟಿ ಖಾದರ್ ಹೇಳಿದರು. ಈ ವೇಳೆ ಕಾಡಿನಲ್ಲಿನೂ ಲಿಂಗಾಯತ, ದಲಿತ, ಬ್ರಾಹ್ಮಣ ಹುಲಿಗಳು ಇವೆಯಾ ಎಂದು ಹುಲಿ ದಾಳಿ ಮಾಡುವ ರೀತಿ ಅನುಕರಣೆ ಮಾಡಿ ಸ್ಪೀಕರ್ ಕಾಲೆಳೆದ ಶಾಸಕ ಯತ್ನಾಳ್, ಸ್ಪೀಕರ್ ತಮ್ಮ ಮಾತನ್ನು ವಾಪಸ್ ಪಡೆಯುತ್ತೇನೆ ಅಂದರು ಬಿಡದೆ ಶಾಸಕ ಯತ್ನಾಳ್ ಮಾತನಾಡಿದರು. ಕೊನೆಗೆ ಸ್ಪೀಕರ್ ಯುಟಿ ಖಾದರ್ ಯತ್ನಾಳ್ ಅವರಿಗೆ ಕೈ ಮುಗಿದರು.