ಬಳ್ಳಾರಿ : ಹಿಂದುಳಿದ ನಾಯಕನಾಗಿ ಬೆಳೆಯಬೇಕೆಂದರೆ ಅಷ್ಟು ಸುಲಭವಲ್ಲ. ಬೆಂಕಿಯ ಮೇಲೆ ಹಗ್ಗದ ಮೇಲೆ ನಡೆದ ಹಾಗೆ ಇರುತ್ತದೆ ಎಂದುಸಂಗೊಳ್ಳಿ ರಾಯಣ್ಣ ಕನಕದಾಸರ ಮೂರ್ತಿ ಉದ್ಘಾಟನೆ ಕಾರ್ಯಕ್ರಮದಲ್ಲಿ MLC ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ನೀಡಿದರು.
ಬಳ್ಳಾರಿ ಜಿಲ್ಲೆಯ ಕಂಪ್ಲಿ ಕ್ಷೇತ್ರದ ಕಲ್ಲಕಂಬ ಗ್ರಾಮದಲ್ಲಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಸಿದ್ದರಾಮಯ್ಯ ಹಿಂದುಳಿದ ಸಮುದಾಯ ನಾಯಕರಾಗಿ ಬೆಳೆಯಬೇಕಾದರೆ ಸಣ್ಣ ಪುಟ್ಟ ತಪ್ಪುಗಳನ್ನು ನೋಡುವವರೇ ಹೆಚ್ಚು ಸಿದ್ದರಾಮಯ್ಯ ಎಲ್ಲವನ್ನೂ ಎದುರಿಸಿ ಬೆಳೆದು ನಿಂತು ಮುಖ್ಯಮಂತ್ರಿ ಆಗಿದ್ದರು. ಈಗ ಮತ್ತೊಮ್ಮೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾರೆ.
ಸಿದ್ದರಾಮಯ್ಯನವರ ಶಕ್ತಿಯನ್ನು ಕುಂದಿಸುವ ಕುತಂತ್ರ ನಡೆಯುತ್ತಿದೆ. ಬಿಜೆಪಿ ಜೆಡಿಎಸ್ ಮೈತ್ರಿ ಮಾಡಿಕೊಂಡು ಕುತಂತ್ರ ನಡೆಸುತ್ತಿವೆ. ಕೇಂದ್ರ ಸರ್ಕಾರದ ಮೂಲಕ ಒತ್ತಡ ಹಾಕಿಸಿ ಕುತಂತ್ರ ಮಾಡುತ್ತಿದ್ದಾರೆ.ನಿಮ್ಮ ಯಾವುದೇ ಕುತಂತ್ರಗಳಿಂದ ಸಿದ್ದರಾಮಯ್ಯ ಜಗ್ಗಲ್ಲ ಬಗ್ಗಲ್ಲ. ಸಿದ್ದರಾಮಯ್ಯನವರ ಮೇಲೆ ನಿಮ್ಮ ಪ್ರೀತಿ ಬೆಂಬಲ ಹೀಗೆ ಇರಲಿ. ಎಂದು ಕಲ್ಲಕಂಬ ಗ್ರಾಮದಲ್ಲಿ ಎಂಎಲ್ಸಿ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ನೀಡಿದರು.