ಬೆಂಗಳೂರು : ರಾಜ್ಯದಲ್ಲಿ ಬಿಜೆಪಿ ಎಂದಿಗೂ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬಂದಿಲ್ಲ ಯಾವಾಗಲೂ ಆಪರೇಷನ್ ಕಮಲದ ಮೂಲಕವೇ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು. ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ವಿಪಕ್ಷ ತೀವ್ರವಾದ ವಿರೋಧ ವ್ಯಕ್ತಪಡಿಸಿತು.
ಇಂದು ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ಆರಂಭಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜ್ಯದಲ್ಲಿ ಬಿಜೆಪಿ ಯಾವಾಗಲು ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದಿದೆ. ರಾಜ್ಯದಲ್ಲಿ ಬಹುಮತ ಪಡೆದು ಎಂದಿಗೂ ಅಧಿಕಾರಕ್ಕೆ ಬಂದಿಲ್ಲ. 600 ಭರವಸೆಗಳನ್ನು ಕೊಟ್ಟು ಶೇಕಡ 10ರಷ್ಟು ಕೂಡ ಭರವಸೆಗಳನ್ನು ಈಡೇರಿಸಿಲ್ಲ.ಸಾಲ ಮನ್ನಾ ಮಾಡಲು ಹಣ ಪ್ರಿಂಟ್ ಮಾಡಲ್ಲ ಎಂದು ಬಿಎಸ್ ಯಡಿಯೂರಪ್ಪ ಹೇಳಿದರು.
ಮೋದಿ ಸಾಲ ಮನ್ನಾ ಮಾಡಿದ್ದು ಆದಾನಿ ಮತ್ತು ಅಂಬಾನಿಯದ್ದು ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು.ಇದರಿಂದ ಬಿಜೆಪಿ ಸದಸ್ಯರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಈ ವೇಳೆ ಪರಿಷತ್ ಸದಸ್ಯ ಸಿಟಿ ರವಿ ಕ್ರಿಯಾಲೋಪ ಎತ್ತಿದರು. ಆಗ ಉತ್ತರ ಕೊಡುವಾಗ ಕ್ರಿಯಾಲೋಪ ಬರಲ್ಲ ಎಂದು ಸಭಾಪತಿ ತಿಳಿಸಿದರು. ಸಿಎಂ ಬಾಯಿಗೆ ಬಂದಿದ್ದು ಮಾತನಾಡಬಹುದಾ ಎಂದು ಪ್ರಶ್ನಿಸಿದರು.ಅದಾನಿ ಅಂಬಾನಿ ಸಾಲ ಮನ್ನಾ ಮಾಡಿದ್ದಾರೆ ಎನ್ನುವ ದಾಖಲೆ ಕೊಡಿ. ಸಿಎಂ ಸದನದ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವಿಪಕ್ಷಗಳು ವಾಗ್ದಾಳಿ ನಡೆಸಿದವು.
ಸದನದಲ್ಲಿ ಪದೇಪದೇ ಮಧ್ಯ ಪ್ರವೇಶ ಮಾಡುತ್ತಿದ್ದ ವಿಪಕ್ಷದ ಸದಸ್ಯರನ್ನು ನೋಡಿ ಸಿಎಂ ಸಿದ್ದರಾಮಯ್ಯ ವಿಪಕ್ಷದವರನ್ನು ನೋಡಿದರೆ ನನಗೆ ಸ್ಪೂರ್ತಿ ಬರುತ್ತದೆ ಎಂದು ಹೇಳಿಕೆ ನೀಡಿದರು. ಈ ಕಡೆ ನೋಡಿ ಮಾತಾಡಿ ಎಂದು ಸಿಎಂ ಗೆಸಭಾಪತಿ ಸಲಹೆ ನೀಡಿದರು. ನಾನು ನಿಮ್ಮನ್ನೇ ನೋಡಿ ಮಾತನಾಡುತ್ತೇನೆ. ಆದರೆ ವಿಪಕ್ಷದವನು ನೋಡಿದರೆ ನನಗೆ ಸ್ಪೂರ್ತಿ ಬರುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಸದನ ನಗೆಗಡಲಲ್ಲಿ ತೇಲಿತು.