ಬೆಂಗಳೂರು : ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಮಂಡ್ಯ ಹಾಗೂ ಕೋಲಾರ ಕ್ಷೇತ್ರಗಳ ಸಂಬಂಧಿಸಿ ದಂತೆ ಬಿಜೆಪಿಗೆ ಬಹಳ ಕಗ್ಗಂಟಾಗಿ ಪರಿಣಮಿಸಿತ್ತು ಏಕೆಂದರೆ ಸುಮಲತಾ ಅಂಬರೀಶ್ ಅವರು ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು ಈ ಬಾರಿ ಮಂಡ್ಯ ಕ್ಷೇತ್ರದಲ್ಲಿ ಕುಮಾರಸ್ವಾಮಿಯವರು ಸ್ಪರ್ಧಿಸಲಿದ್ದಾರೆ ಎಂಬ ಊಹಾಪೋಹಗಳು ಕೇಳಿ ಬಂದಿದ್ದು ಇದೀಗ ಬಿಜೆಪಿ ಹಾಸನ ಕೋಲಾರ ಮಂಡ್ಯ ಕ್ಷೇತ್ರಗಳು ಜೆಡಿಎಸ್ಗೆ ನೀಡಿದೆ ಎಂದು ತಿಳಿದು ಬಂದಿದೆ.
`ಅವರು ಕೋಟ್ಯಂತರ ಭಾರತೀಯರ ನಂಬಿಕೆಯನ್ನು ಮುರಿದಿದ್ದಾರೆ’ : ಕೇಜ್ರಿವಾಲ್ ಬಂಧನದ ಬಗ್ಗೆ `ಅಣ್ಣಾ ಹಜಾರೆ’ ಪ್ರತಿಕ್ರಿಯೆ
ನಿನ್ನೆ ನಡೆದ ಬಿಜೆಪಿ ಸಭೆಯಲ್ಲಿ ರಾಧಾ ಮೋಹನ್ ದಾಸ ಅಗರ್ವಾಲ್ ಹೇಳಿಕೆ ನೀಡಿದ್ದು, ಬಿಜೆಪಿ 25 ಸೀಟ್ಗಳನ್ನು ಆಯ್ಕೆ ಮಾಡಿಕೊಂಡಿದೆ 25 ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧಿಸಲಿದ್ದು ಉಳಿದ 3 ಕ್ಷೇತ್ರಗಳಲ್ಲಿ ಜೆಡಿಎಸ್ ಸ್ಪರ್ಧಿಸಲಿದೆ. ಇದೀಗ ಕೋಲಾರ ಹಾಗೂ ಮಂಡ್ಯ ಕ್ಷೇತ್ರ ಜೆಡಿಎಸ್ ಪಾಲಾಗಿದೆ ಎಂದು ಬಿಜೆಪಿ ಸಭೆಯಲ್ಲಿ ರಾಧಾ ಮೋಹನ್ ದಾಸ್ ಅಗರ್ವಾಲ್ ತಿಳಿಸಿದರು.
ಈ ಮೂಲಕ ಮಂಡ್ಯದ ಹಾಲಿ ಸಂಸದ ಆಗಿರುವ ಸುಮಲತಾ ಅಂಬರೀಶ್ ಗೆ ಬಿಜೆಪಿ ಬಿಗ್ ಶಾಕ್ ನೀಡಿದೆ.ಇತ್ತೀಚಿಗೆ ಟಿಕೆಟ್ ಕುರಿತಾಗಿ ಸುಮಲತಾ ಅಂಬರೀಶ್ ಅವರು ದೆಹಲಿಗೆ ತೆರಳಿ ಅಮಿತ್ ಶಾ ಹಾಗೂ ಜೆಪಿ ನಡ್ಡ ಅವರನ್ನು ಭೇಟಿ ಮಾಡಿದರು ಆದರೂ ಕೂಡ ಅವರಿಗೆ ಇದೀಗ ಟಿಕೆಟ್ ತಪ್ಪಿದ್ದರಿಂದ ಅವರ ಮುಂದಿನ ನಡೆ ಇದೀಗ ಕುತೂಹಲ ಮೂಡಿಸಿದೆ.
ಏಪ್ರಿಲ್ 1 ರಿಂದ ಜಾರಿಗೆ ಬರಲಿವೆ ಹೊಸ ತೆರಿಗೆ ನಿಯಮಗಳು : ಇಲ್ಲಿದೆ ಮಾಹಿತಿ