ನವದೆಹಲಿ: ಖ್ಯಾತ ಪಂಜಾಬಿ ಗಾಯಕ ಸಿಧು ಮೂಸ್ವಾಲಾ ಅವರ ಹತ್ಯೆಗೆ ಸಂಚು ರೂಪಿಸಿದ ಜೈಲಿನಲ್ಲಿರುವ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ನೀಡಿರುವ ಮಾಹಿತಿಯಂತೆ, ಬಾಲಿವುಡ್ ನಟ ಸಲ್ಮಾನ್ ಖಾನ್ ಟಾರ್ಗೆಟ್ ಪಟ್ಟಿಯಲ್ಲಿದ್ದಾರೆ ಎಂದು ಪಂಜಾಬ್ ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ಭಾನುವಾರ ತಿಳಿಸಿದ್ದಾರೆ.
ಮೂಸ್ವಾಲಾ ಕೊಲೆ ಆರೋಪಿ ಕಪಿಲ್ ಪಂಡಿತ್ ಅವರ ಪ್ರಾಥಮಿಕ ವಿಚಾರಣೆಯಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸಂಪತ್ ನೆಹ್ರಾ ಮತ್ತು ಕೆನಡಾ ಮೂಲದ ತಲೆಮರೆಸಿಕೊಂಡಿರುವ ಗೋಲ್ಡಿ ಬ್ರಾರ್ ಮೂಲಕ ಸಲ್ಮಾನ್ ಖಾನ್ ಅವರ ಹತ್ಯೆಯನ್ನು ನಡೆಸಲು ಅವರನ್ನು ಸಂಪರ್ಕಿಸಿತ್ತು ಎಂದು ರಾಜ್ಯ ಪೊಲೀಸ್ ಮುಖ್ಯಸ್ಥರು ಮಾಧ್ಯಮಗಳಿಗೆ ತಿಳಿಸಿದರು.
ಮೂಸೆವಾಲಾ ಹತ್ಯೆ ಪ್ರಕರಣದಲ್ಲಿ ಮಹಾರಾಷ್ಟ್ರದಲ್ಲಿ ಬಂಧಿತರಾಗಿರುವ ಸಂತೋಷ್ ಜಾಧವ್ ಮತ್ತು ಅಜರ್ಬೈಜಾನ್ನಲ್ಲಿ ಬಂಧಿತರಾಗಿರುವ ಸಚಿನ್ ಥಾಪನ್ ಕೂಡ ಸಲ್ಮಾನ್ ಖಾನ್ ಅವರನ್ನು ಗುರಿಯಾಗಿಸುವ ಕೆಲಸ ಮಾಡಿದ್ದ ಎನ್ನಲಾಗಿದೆ. ಮೇ 29 ರಂದು ಪಂಜಾಬ್ನ ಮಾನ್ಸಾ ಜಿಲ್ಲೆಯಲ್ಲಿ ಮೂಸ್ವಾಲಾ ಕೊಲೆಯಾದ ಕೆಲವು ದಿನಗಳ ನಂತರ ಸಲ್ಮಾನ್ ಖಾನ್ಗೆ ಬೆದರಿಕೆ ಬಂದಿತ್ತು.