ಮಂಡ್ಯ : ರಸ್ತೆಯಲ್ಲಿನ ಅವೈಜ್ಞಾನಿಕ ಹಂಪ್ಸ್ ಗೆ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಮಂಡ್ಯ ತಾಲೂಕಿನ ದ್ಯಾಪಸಂದ್ರ ಗ್ರಾಮದ ಬಳಿ ರೋಹಿತ್ ಎನ್ನುವ ಯುವಕ ಸಾವನಪ್ಪಿದ್ದಾನೆ. ಮಂಡ್ಯದ ವಿ.ಸಿ ಫಾರಂ ಗೇಟ್ ಬಳಿ ಅವೈಜ್ಞಾನಿಕ ಹಂಪ್ಸ್ ಗೆ ಯುವಕ ಬಲಿಯಾಗಿದ್ದಾನೆ.
ಮೃತ ಯುವಕನನ್ನು ರೋಹಿತ್ (24) ಎಂದು ತಿಳಿದುಬಂದಿದೆ. ಬೆಂಗಳೂರು-ಮೈಸೂರು ಹಳೆ ಹೆದ್ದಾರಿಯಲ್ಲಿ ಅವೈಜ್ಞಾನಿಕ ರಸ್ತೆ ಹಂಪ್ ಹಾಕಿರುವುದರಿಂದ ಮಂಡ್ಯದ ವಿಸಿ ಫಾರಂ ಗೇಟ್ ಬಳಿ ಹೆದ್ದಾರಿಯಲ್ಲಿ ಹಾಕಿದ್ದ ಅವೈಜ್ಞಾನಿಕ ರೋಡ್ ಹಂಪ್‌ನಿಂದ ದ್ಯಾಪಸಂದ್ರ ಗ್ರಾಮದ ರೋಹಿತ್ ಬೈಕ್‌ನಿಂದ ಬಿದ್ದು ರಸ್ತೆಯಲ್ಲಿ ನರಳಾಡಿದ್ದರು. ನಿನ್ನೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಭಾರೀ ಗಾತ್ರದ ಹಂಪ್ ನಿರ್ಮಾಣ ಮಾಡಿ ರಿಫ್ಲೆಕ್ಟರ್ ಹಾಕದೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ 15ಕ್ಕೂ ಹೆಚ್ಚು ಅಪಘಾತಗಳಾಗಿದ್ದು, ಹಲವರಿಗೆ ಗಾಯ, ಒಂದು ಸಾವು ಸಂಭವಿಸಿದೆ. ಅಪಘಾತಗಳ ಬಳಿಕ ರೋಡ್ ಹಂಪ್ ಬಗ್ಗೆ ಸಾಕಷ್ಟು ದೂರುಗಳು ಬಂದರೂ ಅಧಿಕಾರಿಗಳು ನಿರ್ಲಕ್ಷ್ಯತೋರಿದ್ದಾರೆ.