ಬೆಂಗಳೂರು : ಬಿಗ್ ಬಾಸ್ ಖ್ಯಾತಿಯ ಲಾಯರ್ ಜಗದೀಶ್ ಅವರ ಮೇಲಿನ ಹಲ್ಲೆ ವಿಡಿಯೋ ವೈರಲ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಬಹಳ ಚರ್ಚೆಗೆ ಗ್ರಾಸವಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ನಾಲ್ಕೈದು ಜನ ಲಾಯರ್ ಜಗದೀಶ್ ಅವರೊಂದಿಗೆ ವಾಗ್ವಾದ ನಡೆಸುತ್ತಿರುವ ದೃಶ್ಯವಿದೆ. ಅಲ್ಲದೇ ಈ ವೇಳೆ ವ್ಯಕ್ತಿಯೊಬ್ಬರು ಜಗದೀಶ್ ಮೇಲೆ ಎರಡು ಏಟು ಹಾಕಿದ್ದಾರೆ.
ಹೌದು ಲಾಯರ್ ಜಗದೀಶ್ ಮೇಲೆ ನಾಲ್ಕೈದು ಯುವಕರು ಒಮ್ಮೆಲೇ ಮುಗಿಬಿದ್ದು ಶರ್ಟ್ ಹೇಳಿದು ಎಳೆದಾಡಿ ಹಲ್ಲೆ ನಡೆಸಿರುವ ವಿಡಿಯೋ ಇದೀಗ ವೈರಲ್ ಆಗುತ್ತಿದೆ.ಇತ್ತೀಚೆಗೆ ನಟ ದರ್ಶನ್ ಹಾಗೂ ಅವರ ಅಭಿಮಾನಿಗಳ ವಿರುದ್ಧ ಲಾಯರ್ ಜಗದೀಶ್ ಮಾತನಾಡುತ್ತಿದ್ದರು. ಹಾಗಾಗಿ ದರ್ಶನ್ ಅಭಿಮಾನಿಗಳೇ ಹಲ್ಲೆ ನಡೆಸಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಅದೇ ರೀತಿ ವೀಡಿಯೋ ವೈರಲ್ ಆಗುತ್ತಿದೆ.
ಸ್ಪಷ್ಟನೆ ನೀಡಿದ ಲಾಯರ್!
ಘಟನೆ ಕುರಿತು ಸ್ಪಷ್ಟನೆ ನೀಡಿದ ಜಗದೀಶ್ ಅವರು, ನಮ್ಮ ಕಾಂಪ್ಲೆಕ್ಸ್ ಮುಂದೆ ರಸ್ತೆ ಬ್ಲ್ಯಾಕ್ ಮಾಡಿಕೊಂಡು ಅಣ್ಣಮ್ಮ ದೇವಿ ಕೂರಿಸಿದ್ದಾರೆ. ಅದರ ಬಗ್ಗೆ ಪ್ರಶ್ನಿಸಿದ್ದಕ್ಕೆ 40 ಜನ ದಾಂಡಿಗರು ಅಟ್ಯಾಕ್ ಮಾಡಿದ್ದಾರೆ. ನಮ್ಮ ಗನ್ ಮ್ಯಾನ್ ಮನೆಯಲ್ಲಿದ್ದಾರೆ. ನಾನು ವಾಕಿಂಗ್ ಬಂದಿದ್ದೆ. ಕಾರಣ ಬಹಳ ಸಿಂಪಲ್. ರಸ್ತೆ ಬ್ಲ್ಯಾಕ್ ಮಾಡಿ ಅಣಮ್ಮ ಉತ್ಸವ ಮಾಡುತ್ತಿದ್ದಾರೆ. ಪೊಲೀಸರಿಗೆ ಈ ಬಗ್ಗೆ ತಿಳಿಸಿದ್ದಕ್ಕೆ ಇಷ್ಟೆಲ್ಲಾ ಆಗಿದೆ ಎಂದು ಲಾಯರ್ ಜಗದೀಶ್ ಹೇಳಿದ್ದಾರೆ.
ಕೊಡಿಗೇಹಳ್ಳಿ ಪೊಲೀಸರಿಗೆ ದೂರು ನೀಡಿದರೆ ಅವರಿಗೆ ಬೆಲೆಯಿಲ್ಲ. ರೌಡಿಗಳಿಗೆ ಬೆಲೆ. ಉತ್ಸವ ಮಾಡುವಂತಿದ್ದರೆ ಯಾವುದಾದರೂ ಮೈದಾನದಲ್ಲಿ ಮಾಡಿ. ರಸ್ತೆ ಬ್ಲ್ಯಾಕ್ ಮಾಡಬಾರದು. ಬಿಬಿಎಂಪಿ ಅವರಿಂದ ಅನುಮತಿ ಪಡೆಯಬೇಕು. 40 ಜನ ಬಂದವರೂ ನನ್ನ ಶರ್ಟ್ ಹರಿದಿದ್ದಾರೆ. ಪೊಲೀಸರಿಗೆ ಇಲ್ಲಿ ಬೆಲೆಯಿಲ್ಲ. ಪೊಲೀಸ್ ಕಮೀಷನರ್ ಏನ್ ಮಾಡುತ್ತಿದ್ದೀರಾ? ಎಂದು ಲಾಯರ್ ಜಗದೀಶ್ ಪ್ರಶ್ನಿಸಿದ್ದಾರೆ.