ಬೆಂಗಳೂರು : ಮುಡಾ ಹಗರಣದ ಕುರಿತಂತೆ ಮತ್ತೊಂದು ಸಂಚಲನ ಶುರುವಾಗಿದ್ದು, ಸಚಿವ ಭೈರತಿ ಸುರೇಶ್ ಮುಡಾದಲ್ಲಿ ಬದಲಿ ನಿವೇಶನ ಪಡೆದುಕೊಂಡಿರುವ ಬಿಜೆಪಿ ಮತ್ತು ಜೆಡಿಎಸ್ ನಾಯಕರ ಪಟ್ಟಿ ಬಿಡುಗಡೆ ಮಾಡಿದ್ದಾರೆ.
ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ಮುಡಾದಲ್ಲಿ ಬದಲಿ ನಿವೇಶನ ಪಡೆದುಕೊಂಡಿರುವ ಬಿಜೆಪಿ ಮತ್ತು ಜೆಡಿಎಸ್ ನಾಯಕರ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಇನ್ನು ಮುಡಾ ಬದಲಿ ಸೈಟ್ ಪಡೆದುಕೊಂಡವರ ಪಟ್ಟಿಯಲ್ಲಿ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಹೆಸರು ಸಹ ಇದ್ದು, ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಮುಡಾದಲ್ಲಿ ಜಿ.ಟಿ.ದೇವೇಗೌಡ, ಸಿ.ಎನ್.ಮಂಜೇಗೌಡ, ಹೆಚ್.ವಿಶ್ವನಾಥ್. ಸಾ.ರಾ.ಮಹೇಶ್, ಹೆಚ್.ಡಿ.ಕುಮಾರಸ್ವಾಮಿಗೂ ನಿವೇಶನ ಹಂಚಿಕೆ ಇವರಿಗೆಲ್ಲರಿಗೂ ಬದಲಿ ನಿವೇಶನ ಹಂಚಿಕೆಯಾಗಿದೆ ಎಂದು ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.