ಚಾಮರಾಜನಗರ : ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡಿಪುರದಲ್ಲಿ ಕುಟುಂಬ ನಾಪತ್ತೆ ಕೇಸ್ ಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಬಂಡಿಪುರಕ್ಕೆ ಬಂದಿದ್ದ ದಂಪತಿ ಮತ್ತು 10 ವರ್ಷದ ಬಾಲಕ ನಾಪತ್ತೆಯಾಗಿದ್ದಾರೆ ಎನ್ನಲಾಗಿತ್ತು. ಆದರೆ ಇದೀಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಬೆಂಗಳೂರು ಮೂಲದ ಜೆ. ನಿಶಾಂತ್(40) ಮತ್ತು ಅವರ ಪತ್ನಿ, ಪುತ್ರ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಈಗ ಬಿಬಿಎಂಪಿ ನೌಕರ ಅಂತ ಹೇಳಿ ರೂಮ್ ಬುಕ್ ಮಾಡಿದ್ದ ನಿಶಾಂತ್. ಬಿಬಿಎಂಪಿ ನೌಕರ ಎಂದು ಫೇಕ್ ಐಡಿ ನೀಡಿದ್ದ ನಿಶಾಂತ್, ನಾಪತ್ತೆಯಾಗಿರುವ ನಿಶಾಂತ್ ಮೈತುಂಬ ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ.
ನಿಶಾಂತ್ ಸದ್ಯ ಯಾವುದೇ ಕೆಲಸ ಕಾರ್ಯ ಮಾಡುತ್ತಿರಲಿಲ್ಲ ಸಾಲಕ್ಕೆ ಹೆದರಿ ಕುಟುಂಬದ ಸಮೇತ ನಿಶಾಂತ್ ಬಂಡಿಪುರಕ್ಕೆ ಬಂದಿದ್ದ. ಈ ವೇಳೆ ಕಂಟ್ರಿ ಕ್ಲಬ್ ರೆಸಾರ್ಟ್ ನಲ್ಲಿ ಬಿಬಿಎಂಪಿ ನೌಕರ ಎಂದು ರೂಮ್ ಪಡೆದಿದ್ದ. ಪತ್ನಿ ಚಂದನ ಪುತ್ರನೊಂದಿಗೆ ಬಂಡಿಪುರಕ್ಕೆ ಬಂದಿದ್ದ ಎನ್ನಲಾಗಿದೆ.ಸ್ಥಳಕ್ಕೆ ಚಾಮರಾಜನಗರ ಎಸ್ಪಿ ಡಾ.ಬಿ.ಟಿ. ಕವಿತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.