ಬೆಂಗಳೂರು : ಬೆಂಗಳೂರಿನ ತಿಲಕ್ ನಗರದಲ್ಲಿ ಸಲ್ಮಾ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಪೋಲೀಸರ ತನಿಖೆಯಲ್ಲಿ ಸ್ಫೋಟಕವಾದ ಅಂಶ ಬಯಲಾಗಿದ್ದು, ಬಿಗ್ ಟ್ವಿಸ್ಟ್ ಸಿಕ್ಕಿದೆ. ಸುಬ್ರಮಣಿ ಮತ್ತು ಸೆಂತಿಲ್ ಎಂಬುವವರಿಂದ ಸಲ್ಮಾ ಕೊಲೆಯಾಗಿದೆ.
ಸಲ್ಮಾ ಜೊತೆಗೆ ಸುಬ್ರಮಣ್ಯ ಅನೈತಿಕವಾಗಿ ಸಂಬಂಧ ಹೊಂದಿದ್ದ. ಅಲ್ಲದೇ ಸೆಂಥಿಲ್ ಜೊತೆಗೂ ಸಲ್ಮಾ ಸಲಗೆಯಿಂದ ಇದ್ದಳು. ಬಳಿಕ ಸುಬ್ರಮಣಿ ಹಾಗು ಸೆಂಥಿಲ್ ಇಬ್ಬರನ್ನು ಬಿಟ್ಟು ಸಲ್ಮಾ ಬೇರೊಬ್ಬನ ಜೊತೆಗೆ ಸಂಬಂಧ ಹೊಂದಿದ್ದಾಳೆ. ಇದರಿಂದ ಸುಬ್ರಮಣಿ ಹಾಗು ಸೆಂಥಿಲ್ ಕೋಪಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸುಬ್ರಮಣಿ ಹಾಗೂ ಸೆಂತಿಲ್ ಇಬ್ಬರು ಸೇರಿ ಸಲ್ಮಾ ಕೊಲೆ ಮಾಡಿದ್ದಾರೆ.
ಸಲ್ಮಾ ಮೃತದೇಹ ಸುಮಾರು 100 ಮೀಟರ್ ದೂರದಲ್ಲಿರುವ ಮನೆ ಮನೆಯಲ್ಲಿ ಕೊಲೆ ಮಾಡಿ ಮಧ್ಯರಾತ್ರಿ ಮೃತ ದೇಹ ಸಾಗಿಸಿದ್ದಾರೆ.ಆರೋಪಿಗಳು ಹೆಗಲ ಮೇಲೆ ಶವ ಹೊತ್ತು ತಂದಿದ್ದಾರೆ. ಮಧ್ಯರಾತ್ರಿ ಒಂದು ಸುಮಾರ್ ಗೆ ಆಟೋದಲ್ಲಿ ಶವ ಇಟ್ಟಿದ್ದಾರೆ. ಕಳೆದ ಎರಡು ವರ್ಷದಿಂದ ಅದೇ ಜಾಗದಲ್ಲಿ ಆಟೋ ಇದೆ. ಇದೀಗ ಸುಬ್ರಮಣ್ಯ ಮತ್ತು ಸೆಂಟ್ರಲ್ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ








