ಬೆಂಗಳೂರು : ಬೆಂಗಳೂರಲ್ಲಿ ಅನಧಿಕೃತವಾಗಿ ಪಿಜಿ ನಡೆಸುತ್ತಿರುವವರಿಗೆ ಪಾಲಿಕೆ ಈಗ ಶಾಕ್ ನೀಡಲು ಮುಂದಾಗಿದ್ದು, ನಗರದ ಪಿಜಿಗಳಿಗೆ ಕಡಿವಾಣ ಹಾಕುವುದಕ್ಕೆ ಹೊರಟಿರುವ ಬಿಬಿಎಂಪಿ, ಇದೀಗ ರೂಲ್ಸ್ ಪಾಲಿಸದ ಪಿಜಿಗಳನ್ನ ಬಂದ್ ಮಾಡುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಹೌದು ಇತ್ತೀಚೆಗೆ ಬೆಂಗಳೂರಿನ ಹೆಚ್ಎಸ್ಆರ್ ಲೇಔಟ್ನ ಲೇಡೀಸ್ ಪಿಜಿಯ ಓರ್ವ ಯುವತಿ ನಗ್ನವಾಗಿ ಓಡಾಡಿದ್ದ ವಿಡಿಯೋ ವೈರಲ್ ಆಗಿತ್ತು. ಪಿಜಿಯಿಂದ ಅಕ್ಕಪಕ್ಕದ ಜನರಿಗೆ ತೊಂದರೆಯಾಗುತ್ತಿದೆ ಎಂಬ ಮಾತು ಕೇಳಿಬಂದಿತ್ತು. ಹಾಗಾಗಿ ಇದೀಗ ಅನಧಿಕೃತ ಪಿಜಿಗಳು ಮತ್ತು ಅವುಗಳಿಂದ ಉಂಟಾಗುತ್ತಿರುವ ಸಮಸ್ಯೆಗಳಿಂದಾಗಿ ಬಿಬಿಎಂಪಿ ಕಠಿಣ ಕ್ರಮಕ್ಕೆ ಮುಂದಾಗಿದೆ.
ರಾಜಧಾನಿಯ ಪಿಜಿಗಳಿಗೆ ಈಗಾಗಲೇ ಕೆಲ ಮಾರ್ಗಸೂಚಿಗಳನ್ನ ಹೊರಡಿಸಿದ್ದ ಪಾಲಿಕೆ, ಇದೀಗ ರೂಲ್ಸ್ ಬ್ರೇಕ್ ಮಾಡುತ್ತಿರುವ ಪಿಜಿಗಳನ್ನ ಬಂದ್ ಮಾಡಿಸುವುದಕ್ಕೆ ಸಜ್ಜಾಗಿವೆ. ಸದ್ಯ ಈಗಾಗಲೇ 1200 ಅನಧಿಕೃತ ಪಿಜಿಗಳನ್ನ ಗುರುತಿಸಿರುವ ಪಾಲಿಕೆ, ರೂಲ್ಸ್ ಮೀರಿದ ಪಿಜಿಗಳಿಗೆ ಬೀಗ ಜಡಿಯೋಕೆ ಪ್ಲಾನ್ ಮಾಡಿದೆ. ಬಿಬಿಎಂಪಿಯ ವಿವಿಧ ವಲಯಗಳಲ್ಲಿ ಈಗಾಗಲೇ ನಿಯಮ ಮೀರಿದ ಪಿಜಿಗಳಿಗೆ ಬೀಗ ಜಡಿಯೋದಾಗಿ ಎಚ್ಚರಿಕೆ ನೀಡಿದೆ.