ಬೆಂಗಳೂರು : ಬೆಂಗಳೂರಿನ ಜನತೆಗೆ ಬಿಗ್ ಶಾಕ್. ಕಾವೇರಿ ಕುಡಿಯುವ ನೀರಿನ ದರವನ್ನು ಬೆಂಗಳೂರು ಜಲಮಂಡಳಿಯು ಏರಿಕೆ ಮಾಡಿದೆ. ನೀರಿನ ಸಮರ್ಪಕ ಬಳಕೆಗೆ ಒತ್ತು ನೀಡುವುದನ್ನ ಮನಗಾಣಿಸುವ ಅಂಶಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ನೀರಿನ ದರವನ್ನು ಏರಿಕೆ ಮಾಡಲು ಉದ್ದೇಶಿಸಲಾಗಿದೆ.
ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ ರಾಮ್ ಪ್ರಸಾತ್ ಮನೋಹರ್ ಈ ಕುರಿತು ಮಾಹಿತಿ ನೀಡಿದ್ದು, ವಿವಿಧ ಸ್ಲಾಬ್ ಗಳಿಗೆ ಆಧಾರಿತವಾಗಿ ಗೃಹ ಬಳಕೆಗೆ ಪ್ರತಿ ಲೀಟರ್ ನೀರಿಗೆ ಕನಿಷ್ಠ 0.15 ಪೈಸೆ (ಒಂದು ಪೈಸೆಗಿಂತಲೂ ಕಡಿಮೆ) ಹಾಗೂ ಗರಿಷ್ಠ 1 ಪೈಸೆ, ದೊಡ್ಡ ಅಪಾರ್ಟ್‌ಮೆಂಟ್‌ಗಳಿಗೆ ಕನಿಷ್ಠ 0.30 ಪೈಸೆ ಹಾಗೂ ಗರಿಷ್ಠ 1 ಪೈಸೆಯಷ್ಟು ಏರಿಕೆ ಮಾಡಲಾಗಿದೆ ಹಾಗೂ ವಾಣಿಜ್ಯ ಉದ್ದೇಶಕ್ಕೆ ಕನಿಷ್ಠ ದರವನ್ನು ಪ್ರತಿ ಲೀ.0.90 ಪೈಸೆ ಹಾಗೂ ಗರಿಷ್ಠ 1.20 ಪೈಸೆ ಹೆಚ್ಚಳ ಮಾಡಲಾಗಿದ್ದು ಕಾವೇರಿ ನೀರಿನ ಬಳಕೆಗೆ ಅನುಗುಣವಾಗಿ ದರ ಏರಿಕೆ ಮಾಡಲಾಗಿದೆ. ಈ ಬಗ್ಗೆ ಏ.10ರ ಇಂದು ಅಧಿಕೃತವಾಗಿ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದ್ದಾರೆ.
ಕಳೆದ 10 ವರ್ಷಗಳಲ್ಲಿ ವಿದ್ಯುತ್ ವೆಚ್ಚ (Electricity cost)ವು ಶೇಕಡಾ 107% ರಷ್ಟು ಹೆಚ್ಚಾಗಿದೆ. ಹಾಗೆಯೇ ನಿರ್ವಹಣಾ ವೆಚ್ಚದಲ್ಲಿ ಶೇಡಕಾ 122.5 ರಷ್ಟು ಹೆಚ್ಚಳವಾಗಿದೆ.ಪ್ರಸ್ತುತ ಬೆಂಗಳೂರು ಜಲಮಂಡಳಿಯ ಮಾಸಿಕ ವೆಚ್ಚ 200 ಕೋಟಿ ರೂಪಾಯಿಗಳು. ಆದರೆ, ಪ್ರತಿ ತಿಂಗಳು ಸಂಗ್ರಹಣೆ ಆಗುತ್ತಿರುವುದು ಕೇವಲ 120 ಕೋಟಿ ರೂಪಾಯಿಗಳು ಮಾತ್ರ. ಪ್ರತಿ ತಿಂಗಳು ಸುಮಾರು 80 ಕೋಟಿ ರೂಪಾಯಿಗಳ ಆರ್ಥಿಕ ಕೊರತೆಯನ್ನ ಬೆಂಗಳೂರು ಜಲಮಂಡಳಿ ನಿಭಾಯಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ನೀರಿನ ದರ ಏರಿಕೆ ವಿವರ ಹೀಗಿದೆ
ಡೊಮೆಸ್ಟಿಕ್ ಕನೆಕ್ಷನ್ಗೆ ಗರಿಷ್ಠ ಲೀಟರ್ಗೆ ಒಂದು ಪೈಸೆ ಹೆಚ್ಚಳವಾಗಲಿದೆ.
0-8 ಸಾವಿರದೊಳಗೆ ಸ್ಲ್ಯಾಬ್ಗೆ ಲೀಟರ್ಗೆ 0.15 ಪೈಸೆ ಹೆಚ್ಚಳವಾಗಲಿದೆ.
8-25 ಸಾವಿರದೊಳಗಿನ ಸ್ಲ್ಯಾಬ್ಗೆ ಲೀಟರ್ಗೆ 0.40 ಪೈಸೆ ಹೆಚ್ಚಳವಾಗಲಿದೆ.
25 ಸಾವಿರ ಲೀಟರ್ಗಿಂತ ಹೆಚ್ಚು ಬಳಕೆ ಮಾಡಿದ್ರೆ 0.80 ಪೈಸೆ ಏರಿಕೆಯಾಗಲಿದೆ.
50 ಸಾವಿರದಿಂದ 1 ಲಕ್ಷ ಲೀಟರ್ ನೀರು ಬಳಕೆಗೆ 1 ಪೈಸೆ ಹೆಚ್ಚಳವಾಗಲಿದೆ.