ಬೆಂಗಳೂರು : ಅನರ್ಹ ಪಡಿತರ ಚೀಟಿದಾರರಿಗೆ ರಾಜ್ಯ ಸರ್ಕಾರವು ಬಿಗ್ ಶಾಕ್ ನೀಡಿದ್ದು, ಅನರ್ಹರರ ಪತ್ತೆಗೆ ರಾಜ್ಯ ಸರ್ಕಾರವು ಮಹತ್ವದ ಕ್ರಮ ಕೈಗೊಂಡಿದೆ.
ಹೌದು, ರಾಷ್ಟ್ರೀಯ ಆಹಾರ ಕಾಯ್ದೆ ಉಲ್ಲಂಘಿಸಿರುವ ಮತ್ತು ಅನರ್ಹ ಪಡಿತರ ಚೀಟಿ ಪತ್ತೆ ಸಲುವಾಗಿ ಖಾಸಗಿ (ಥರ್ಡ್ ಪಾರ್ಟಿ) ಸಮೀಕ್ಷೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಈ ಮೂಲಕ ಅನರ್ಹರನ್ನು ಹೊರ ಹಾಕಲು ತಂತ್ರ ರೂಪಿಸಿದೆ.
2011ರ ಜನ ಸಂಖ್ಯೆ ದತ್ತಾಂಶದ ಪ್ರಕಾರ ರಾಜ್ಯದಲ್ಲಿ 11,99,700 ಅಂತ್ಯೋದಯ (ಎಎವೈ) 4,01, 93,130 ಸ್ವೀಕೃತದಾರರ ಮಿತಿ ನಿಗದಿ ಮಾಡಿದೆ. ಆದಾಗ್ಯೂ ರಾಜ್ಯದಲ್ಲಿ ಆದ್ಯತಾ ಕುಟುಂಬ (ಪಿಎಚ್‌ಎಚ್) ಮತ್ತು ಎಎವೈ 44 ಲಕ್ಷಕ್ಕೂ ಹೆಚ್ಚು ಇರುವುದು ಕಂಡುಬಂದಿದೆ. ರಾಜ್ಯ ಸರ್ಕಾರದ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬಿದ್ದಿದೆ. ಆದರೆ, ದೇಶದಲ್ಲಿ ಅತಿಹೆಚ್ಚು ತೆರಿಗೆ ಸಂಗ್ರಹವಾಗುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ.
ಅನರ್ಹತೆಗೆ ಮಾನದಂಡಗಳು
ವಾರ್ಷಿಕ ಆದಾಯ 1.20 ಲಕ್ಷಗಿಂತ ಹೆಚ್ಚಿರುವ ಕುಟುಂಬ
3 ಹೆಕ್ಟೇರ್‌ಗಿಂತ ಹೆಚ್ಚಿನ ಭೂಮಿ ಹೊಂದಿದವರು
ಸರ್ಕಾರಿ, ಅನುದಾನಿತ, ಸರ್ಕಾರಿ ಸಂಯೋಜಿತ ಸಂಸ್ಥೆಗಳಲ್ಲಿ ನೌಕರರು
1 ಸಾವಿರ ಚದರಡಿ ಪಕ್ಕಾ ಮನೆ ಹೊಂದಿದ್ದರೆ
ಆದಾಯ, ವೃತ್ತಿ ತೆರಿಗೆ, ಜಿಎಸ್‌ಟಿ ಪಾವತಿದಾರರು
ವಾಣಿಜೇತರ ವಾಹನ ಹೊಂದಿದವರು