ಬೆಂಗಳೂರು : ಕರ್ನಾಟಕದಿಂದ ಹಜ್ ಯಾತ್ರೆ ಕೈಗೊಳ್ಳುವ ಯಾತ್ರಿಗಳಿಗೆ ರಾಜ್ಯ ಹಜ್ ಸಮಿತಿ, ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ಯಾವುದೇ ಅನುದಾನ, ಸಹಾಯಧನ ನೀಡುತ್ತಿಲ್ಲ. ಆದರೆ, ಸುಗಮ ಯಾತ್ರೆಗಾಗಿ ವಿವಿಧ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಬರುವ ಸಾಯತ ಸ್ವಾಯತ್ತ ಸಂಸ್ಥೆಯಾಗಿರುವ ರಾಜ್ಯ ಹಜ್ ಸಮಿತಿಯಿಂದ ಯಾತ್ರೆ ಪ್ರಾರಂಭ ವಾಗುವ ಮುನ್ನ ಹಜ್ ಕ್ಯಾಂಪ್ ಆಯೋ ಜಿಸಲಾಗುತ್ತದೆ. ಈ ವೇಳೆ ಯಾತ್ರಿಗಳು ಉಳಿದುಕೊಳ್ಳಲು ಬೋರ್ಡಿಂಗ್ ಮತ್ತು ಲಾಡ್ಡಿಂಗ್ ವ್ಯವಸ್ಥೆಗಳನ್ನು ಮಾಡಲಾಗುತ್ತದೆ.
ಕಾಗದ ಪತ್ರ, ವಿದೇಶಿ ವಿನಿಮಯ ಹಂಚಿಕೆ ವ್ಯವಸ್ಥೆ, ವಿಮಾನ ನಿಲ್ದಾಣಕ್ಕೆ ತಲುಪಿಸುವುದು ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ಸಂಬಂಧ ಪಟ್ಟ ಇಲಾಖೆಗಳ ಸಹಕಾರದೊಂದಿಗೆಒದಗಿಸಲಾಗುತ್ತದೆ ಎಂದು ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಇತ್ತೀಚೆಗೆ ನಡೆದ ವಿಧಾನಸಭಾ ಅಧಿವೇಶನದಲ್ಲಿ ಉತ್ತರ ನೀಡಿದ್ದಾರೆ.
ಜನಸಂಖ್ಯೆ ಆಧಾರದ ಮೇಲೆ ಎಷ್ಟುಯಾತ್ರಿಕರನ್ನು ಹಜ್ ಯಾತ್ರೆಗೆ ಕಳುಹಿಸ ಬೇಕು ಎಂಬುದನ್ನು ಮುಂಬೈ ನಲ್ಲಿರುವ ಹಜ್ ಸಮಿತಿ ನಿರ್ಧರಿಸುತ್ತದೆ. ಈ ಸಮಿತಿಯೊಂದಿಗೆ ರಾಜ್ಯ ಹಜ್ ಸಮಿತಿ ಸಂಯೋಜನೆ ಮಾಡುತ್ತದೆ. ಅರೇಬಿಯಾದಲ್ಲಿ ಕರ್ನಾಟಕದಿಂದ ತೆರಳುವ ಯಾತ್ರಿಕರ ಯೋಗಕ್ಷೇಮಕ್ಕೆ ಸ್ವಯಂ ಸೇವಕರನ್ನು ನಿಯೋಜಿಸಲಾಗುತ್ತದೆ.