ಬೆಂಗಳೂರು : ಬಿಬಿಎಂಪಿ ಸೇರಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ರಾಜ್ಯ ಸರ್ಕಾರಕ್ಕೆ ಮತ್ತಷ್ಟು ದಿನಗಳ ದಿನಗಳ ಅವಕಾಶ ಸಿಕ್ಕಿದ್ದು, ರಾಜ್ಯ ಸರ್ಕಾರಕ್ಕೆ ಚುನಾವಣೆ ನಡೆಸಲು ಸುಪ್ರೀಂಕೋರ್ಟ್ ಮಾರ್ಚ್ 31 ರ ತನಕ ಗಡುವು ನೀಡಿದೆ.
BIG NEWS : 2023ರಲ್ಲಿ ಟೆಕ್ ಕಂಪನಿಗಳಲ್ಲಿ ಮತ್ತಷ್ಟು ಹೆಚ್ಚಲಿದೆ ಉದ್ಯೋಗ ಕಡಿತ… ಆರ್ಥಿಕ ತಜ್ಞರು ಹೇಳಿದ್ದೇನು?
ನ್ಯಾಯಮೂರ್ತಿ ಅಬ್ದುಲ್ ನಾಸೀರ್ ಹಾಗೂ ನ್ಯಾ. ಹಿಮಾಕೊಹ್ಲಿ ಅವರಿದ್ದ ದ್ವಿಸದಸ್ಯ ಪೀಠದ ಸ್ಥಳೀಯ ಸಂಸ್ಥೆಗಳಿಗೆ ಇನ್ನೂ ಚುನಾವಣೆ ನಡೆಸಿರುವ ಸರ್ಕಾರದ ನಿರ್ಧಾರ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣ ನಡೆಸಿದ್ದು, ಬಿಬಿಎಂಪಿ ಸೇರಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ 2023ರ ಮಾರ್ಚ್ 31 ರವರೆಗೆ ಗಡುವು ನೀಡಿದೆ.
ಈ ವೇಳೆ ಸರ್ಕಾರದ ಪರ ವಾದ ಮಂಡಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿ ನೀಡಬೇಕಿದೆ. ಇದಕ್ಕಾಗಿ ನ್ಯಾ. ಭಕ್ತವತ್ಸಲಂ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಈ ಸಮಿತಿ ಮಾಹಿತಿ ಮತ್ತು ಅಂಕಿ ಅಂಶಗಳನ್ನು ಸಂಗ್ರಹಿಸುತ್ತಿದೆ. ಮೀಸಲಾತಿ ಬಗ್ಗೆ ವರದಿ ನೀಡಲು ಮತ್ತಷ್ಟು ಸಮಯ ಬೇಕು ಎಂದು ಹೇಳಿದ್ದಾರೆ. ನ್ಯಾಯಪೀಠವು ಬಿಬಿಎಂಪಿ ಸೇರಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮಾರ್ಚ್ 31 ರವರೆಗೆ ಗಡವು ವಿಸ್ತರಣೆ ಮಾಡಿದೆ.