ವಿಜಯಪುರ : ಭೀಮಾತೀರದಲ್ಲಿ ಇದೀಗ ಮತ್ತೆ ನೆತ್ತರು ಹರಿದಿದ್ದು, ಚಂದಪ್ಪ ಹರಿಜನ್ ಪಕ್ಕಾ ಬಲಗೈ ಬಂಟ ಎನಿಸಿಕೊಂಡಿದ್ದ ಭಾಗಪ್ಪ ಹರಿಜನನ್ನು ವಿಜಯಪುರ ನಗರದ ರೇಡಿಯೋ ಕೇಂದ್ರದ ಬಳಿ ತಡರಾತ್ರಿ ದುಷ್ಕರ್ಮಿಗಳು ಗುಪ್ತಾಂಗ ಕಟ್ ಮಾಡಿ ಭೀಕರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ. ಈ ಒಂದು ಕೊಲೆ ಸಂಬಂಧಿಸಿದಂತೆ ಭಾಗಪ್ಪ ಹರಿಜನ್ ಪತ್ರಯರು ಪಿಂಟ್ಯಾನೇ ನಮ್ಮ ತಂದೆಯನ್ನು ಕೊಲೆ ಮಾಡಿದ್ದಾನೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ತಂದೆಯನ್ನು ಪಿಂಟ್ಯಾ ಹತ್ಯೆ ಮಾಡಿದ್ದಾನೆ ಎಂದು ಪುತ್ರಿಯರಾದ ಗಂಗೂಬಾಯಿ ಹಾಗೂ ಇಂದ್ರಬಾಯಿ ಹೇಳಿಕೆ ನೀಡಿದ್ದಾರೆ. ಹತ್ಯೆ ಬಗ್ಗೆ ಪಿಂಟ್ಯಾ ಸ್ಟೇಟಸ್ ಅಲ್ಲಿ ಹಾಕಿಕೊಂಡಿದ್ದ. ಸಹೋದರನ ಆತ್ಮಕ್ಕೆ ಶಾಂತಿ ಸಿಗ್ತು ಅಂತ ಸ್ಟೇಟಸ್ ಹಾಕಿಕೊಂಡಿದ್ದ. ನಮ್ಮ ತಂದೆಯನ್ನು ಪಂಟ್ಯಾ ಸೇರಿ ಇತರರು ಕೊಲೆ ಮಾಡಿದ್ದಾರೆ ನಮ್ಮ ತಂದೆಯ ಹತ್ಯೆಗೆ ನ್ಯಾಯ ಸಿಗಲೇಬೇಕು ಎಂದು ಪುತ್ರಿಯರಾದ ಗಂಗೂಬಾಯಿ ಮತ್ತು ಇಂದಿರಾಬಾಯಿ ಹೇಳಿಕೆ ನೀಡಿದರು