ಬೆಳಗಾವಿ : ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಿದ್ದು ಇಂದು ಬಿಜೆಪಿ ಶಾಸಕ ಸುನಿಲ್ ಕುಮಾರ್ ಬೆಟ್ಟಿಂಗ್ ಚರ್ಚೆಯ ಸಂದರ್ಭದಲ್ಲಿ ರಾಜ್ಯದಲ್ಲಿ ಸಿಎಂ ಸ್ಥಾನದ ಬಗ್ಗೆ ಬೆಟ್ಟಿಂಗ್ ನಡಿತಿದೆ ಎಂದು ವ್ಯಂಗ್ಯವಾಡಿದರು.
ಅಧಿವೇಶನದಲ್ಲಿ ಬೆಟ್ಟಿಂಗ್ ಚರ್ಚೆಯ ವೇಳೆ ಬಿಜೆಪಿ ಶಾಸಕ ಸುನಿಲ್ ಕುಮಾರ್ ಮಾತನಾಡಿ ಮುಂದಿನ ಸಿಎಂ ಯಾರು ಎಂಬ ಬೆಟ್ಟಿಂಗ್ ಜೋರಾಗಿದೆ ರಾಜ್ಯದಲ್ಲಿ ಸಿಎಂ ಸ್ಥಾನದ ಬಗ್ಗೆ ಬೆಟ್ಟಿಂಗ್ ನಡೆಯುತ್ತಿದೆ. ಆನ್ಲೈನ್ ಬೆಟ್ಟಿಂಗ್ ಬಗ್ಗೆ ಮಂಜುನಾಥ್ ಪ್ರಸ್ತಾಪಿಸಿದರು. ಈ ವೇಳೆ ಸುನಿಲ್ ಕುಮಾರ್ ಮಧ್ಯಪ್ರವೇಶಿಸಿ ಇತ್ತೀಚಿಗೆ ಮುಂದಿನ ತಿಂಗಳು ಯಾರು ಮುಖ್ಯಮಂತ್ರಿ ಆಗುತ್ತಾರೆ ಎಂಬ ಬೆಟ್ಟಿಂಗ್ ಕೂಡ ಜೋರಾಗಿದೆ ಇದರ ಬಗ್ಗೆ ಸರ್ಕಾರ ಏನಾದ್ರೂ ಕ್ರಮ ತೆಗೆದುಕೊಂಡಿದೆಯಾ ಅಂತ ವ್ಯಂಗ್ಯವಾಡಿದರು.








