ಬೆಂಗಳೂರು : ಇದು ಒಬ್ಬ ಅಂತರಾಷ್ಟ್ರೀಯ ಟೆಕ್ಕಿಯೊಬ್ಬ ಪಿಂಪ್ ಆದ ಕಥೆಯಾಗಿದ್ದು ಇದ್ದ ಒಂದುವರೆ ಲಕ್ಷದ ಸಂಬಳ ಕೆಲಸವನ್ನ ಬಿಟ್ಟು ಅಡ್ಡದಾರಿ ಹಿಡಿದಿದ್ದಾನೆ.ಕಂಪನಿಯೊಂದರಲ್ಲಿ ವೈಶಾಕ್ ಎನ್ನುವ ವ್ಯಕ್ತಿಯಾಗಿ ಕೆಲಸ ಮಾಡುತ್ತಿದ್ದ.ಸ್ಟಾಕ್ ಮಾರ್ಕೆಟ್ ಹುಚ್ಚಿಗೆ ಬಿದ್ದು ಇದೀಗ ಲಕ್ಷ ಲಕ್ಷ ಹಣವನ್ನು ಕಳೆದುಕೊಂಡಿರುವ ಘಟನೆ ಬೆಂಗಳೂರು ಬೈಯಪ್ಪನ ಹಳ್ಳಿ ಪೊಲೀಸ್ ಅಣ್ಣ ವ್ಯಾಪ್ತಿಯಲ್ಲಿ ನಡೆದಿದೆ.
ಟೆಕ್ಕಿಯಾಗಿದ್ದ ವೈಶಾಕ್ ಇದ್ದ ಕೆಲಸವನ್ನ ಬಿಟ್ಟು ಸ್ಟಾಕ್ ಮಾರ್ಕೆಟ್ ನಲ್ಲಿ ಹಣ ಹೂಡಿಕೆಯನ್ನು ಮಾಡಿ ಲಕ್ಷಾಂತರ ರೂಪಾಯಿ ನಷ್ಟ ಮಾಡಿಕೊಂಡಿದ್ದಾನೆ.ಲಕ್ಷ ಸಾಲ ಮಾಡಿ ವೈಶಾಖ ಇದೀಗ ಕೆಲಸವನ್ನು ಬಿಟ್ಟಿದ್ದ ಎನ್ನಲಾಗುತ್ತಿದೆ.ನಂತರ ವೈಶಾಕ್ ಮ್ಯಾಟ್ರಿಮೋನಿ ರೀತಿಯಲ್ಲಿ ಆಪ್ ತಯಾರಿಸಿದ ಎನ್ನಲಾಗುತ್ತಿದೆ.
ಈ ಒಂದು ಆಪ್ ಮೂಲಕ ಪರಸ್ಪರ ಸಂಪರ್ಕ ಮಾಡಿಸಲು ವೈಶಾಖ ಹಣ ಪಡೆಯುತ್ತಿದ್ದ ಎನ್ನಲಾಗುತ್ತಿದೆ.ಈ ಒಂದು ಕೆಲಸ ಚೆನ್ನಾಗಿ ಸಾಗುತ್ತಿದೆ ಎನ್ನುವಾಗಲೇ ಗೋವಿಂದರಾಜು ಎನ್ನುವ ವ್ಯಕ್ತಿ ಎಂಟ್ರಿ ಕೊಡುತ್ತಾನೆ. ಬಿ ಟೆಕ್ ಮುಗಿಸಿದ್ದ ಗೋವಿಂದರಾಜನಿಂದ ಹೊಸ ಆಪ್ ನ ಪ್ರೈವಸಿ ನೋಡಿ ಗೋವಿಂದರಾಜು ಶಾಕ್ ಆಗಿದ್ದ. ಮ್ಯಾಟ್ರಿಮೋನಿ ಬದಲು ವೇಶ್ಯಾವಾಟಿಕೆ ಶುರು ಮಾಡು ಎಂದು ವೈಶಾಕ್ ಗೆ ಗೋವಿಂದರಾಜು ಹೇಳಿರುತ್ತಾನೆ.
ವಿದೇಶ ಮಹಿಳೆಯರಿಗೆ ಸಖತ್ ಡಿಮ್ಯಾಂಡ್ ಕೂಡ ಇದೆ.ಕೋಟಿ ಕೋಟಿ ಹಣ ದುಡಿಯಬಹುದು ಅಂತ ಈ ಒಂದು ದಂಧೆಯಲ್ಲಿ ವೈಶಾಖ ಮೈಂಡ್ ವಾಶ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಈ ದಂದೆ ಹಿಂದೆ ಇನ್ನೂ ಯಾರು ಯಾರು ಇದ್ದಾರೆ ಎಂದು ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.