ಬೆಂಗಳೂರು : ಕಳೆದ ಏಪ್ರಿಲ್ 2 ರಂದು ಬೆಸ್ಕಾಂನ ಸುಂಕದಟ್ಟೆ ಕದಟ್ಟೆ ವ್ಯಾಪ್ತಿಯಲ್ಲಿ ವಿದ್ಯುತ್ ವಿದ್ಯುತ್ ಪರಿವರ್ತಕ (ಟಿಸಿ ರಿಪೇರಿ ವೇಳೆ ವಿದ್ಯುತ್ ಸ್ಪರ್ಶದಿಂದ ತೀವ್ರ ಸುಟ್ಟ ಗಾಯಗಳಾಗಿ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪವರ್ ಮ್ಯಾನ್ ಪ್ರಕಾಶ್ (45) ಚಿಕಿತ್ಸೆ ಫಲಕಾರಿ ಯಾಗದೆ ನಿನ್ನೆ ಮೃತಪಟ್ಟಿದ್ದಾರೆ.
ಸುಂಕದಕಟ್ಟೆಯ ವಿಭಾಗದ ಬೈರವೇಶ್ವರ ಕೈಗಾರಿಕಾ ಪ್ರದೇಶದ ಬಳಿ ಅವಘಡ ನಡೆದಿತ್ತು. 848ನೇ ಸಂಖ್ಯೆಯ ವಿದ್ಯುತ್ ಪರಿವರ್ತಕ ದುರಸ್ತಿ ಮಾಡುವಾಗ ಶಾಕ್ ತಗುಲಿದ್ದು ಮೈ ಎಲ್ಲಾ ಗಂಭೀರ ಸುಟ್ಟ ಗಾಯಗಳಾಗಿತ್ತು. ತಕ್ಷಣ ಅವರನ್ನು ಕೆಂಗೇರಿಯ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಸೇಂಟ್ ಜಾನ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.