ಬೆಳಗಾವಿ : ಕಳೆದ ಕೆಲವು ದಿನಗಳ ಹಿಂದೆ ಬೆಳಗಾವಿಯಲ್ಲಿ ಹೆರಿಗೆ ಆದಮೇಲೆ ತಾಯಿ ಒಬ್ಬಳು ಮಗುವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದ ಘಟನೆ ನಡೆದಿತ್ತು. ಇದೀಗ ಈ ಒಂದು ಘಟನೆಗೆ ಸಂಬಂಧಿಸಿದಂತೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಮೊಲದ ಬೀಬಿಜಾನ್ ಎನ್ನುವ ಮಹಿಳೆಯನ್ನು ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಹೌದು ಕಳೆದ ಡಿಸೆಂಬರ್ ಹತ್ತರಂದು ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಈ ಒಂದು ಘಟನೆ ನಡೆದಿತ್ತು ಹೆರಿಗೆ ಆದ ಬಳಿಕ ತಾಯಿ ಬೀಬಿಜಾನ್ ನವಜಾತ ಹೆಣ್ಣು ಆಸ್ಪತ್ರೆಯಲ್ಲಿ ಬಿಟ್ಟು ಪರಾರಿಯಾಗಿದ್ದಳು, ಸರಿಯಾದ ರೀತಿ ಆರೈಕೆ ಸಿಗದೇ ನವಜಾತ ಹೆಣ್ಣು ಮಗು ಸಾವನ್ನಪ್ಪಿತ್ತು. ಗರ್ಭದಲ್ಲಿ ಮಗು ಅಡ್ಡಲಾಗಿ ಮಲಗಿದ್ದ ಹಿನ್ನೆಲೆಯಲ್ಲಿ ಇದರಿಂದ ಕುಟುಂಬಕ್ಕೆ ಕೇಡಾಗುತ್ತೆ ಎಂದು ತಾಯಿ ಮಗುವನ್ನು ಬಿಟ್ಟು ಪರಾರಿಯಾಗಿದ್ದಾಳೆ.ಸದ್ಯ ಪರಾರಿ ಆಗಿದ್ದ ತಾಯಿ ಬೀಬಿಜಾನ್ ಎನ್ನುವ ಮಹಿಳೆಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.