ಬೆಂಗಳೂರು : ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತಿಯಾಗಿ ಭಾರತ ಆಪರೇಷನ್ ಸಿಂಧೂರದ ಮೂಲಕ ಪಾಕಿಸ್ತಾನದ ಹುಟ್ಟಡಗಿಸಿದ್ದು, ಈ ಯಶಸ್ವಿ ಕಾರ್ಯಾಚರಣೆ ಬೆನ್ನಲೇ ದೇಶಾದ್ಯಂತ ಬಿಜೆಪಿ ತಿರಂಗ ಯಾತ್ರೆಯನ್ನು ಆರಂಭಿಸಿದೆ. ಭಾರತ ಧ್ವಜ ಮತ್ತು ಸೈನಿಕರ ಫೋಟೋ ಒಳಗೊಂಡ ಟ್ಯಾಬ್ಲೋಗಳನ್ನು ಬಿಜೆಪಿ ಪ್ರದರ್ಶಿಸುತ್ತ ಯಾತ್ರೆ ನಡೆಸುತ್ತಿದೆ.
ಇದೀಗ ಸದಾ ಒಂದಿಲ್ಲೊಂದು ವಿವಾದ ಹೇಳಿಕೆ ನೀಡುವುದಲ್ಲಿ ಬಹು ಭಾಷಾ ನಟ ಪ್ರಕಾಶ್ ರಾಜ್ ಮುಂದು. ಇದೀಗ ಬಿಜೆಪಿಯನ್ನು ಅಣಕಿಸುವ ಭರದಲ್ಲಿ, ಬಿಜೆಪಿ ಆರಂಭಿಸಿದ ತಿರಂಗಾ ಯಾತ್ರೆ ಬಗ್ಗೆ ‘ವೋಟಿಗಾಗಿ ರಸ್ತೆಯಲ್ಲಿ ಭಿಕ್ಷೆ ಎತ್ತುತ್ತಿರುವ ಭಿಕ್ಷುಕರು’ ಎಂದು ಟ್ವೀಟ್ ಮಾಡಿದ್ದಾರೆ.
ಇಂದು ಬೆಂಗಳೂರಿನ ಮಲ್ಲೇಶ್ವರಂ ನಲ್ಲಿ ಬಿಜೆಪಿ ತಿರಂಗ ಯಾತ್ರೆ ನಡೆಸಿದ್ದು, ಈ ವೇಳೆ ದೊಡ್ಡ ದೊಡ್ಡ ಟ್ಯಾಬ್ಲೋಗಳ ಪ್ರದರ್ಶನ ಮಾಡಿದೆ. ಈ ಟ್ಯಾಬ್ಲೋಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಸೈನಿಕನ ಅವತಾರದಲ್ಲಿ ಗನ್ ಹಿಡಿದು ನಿಂತಿರುವುದನ್ನು ಕಾಣಬಹುದು.
ಬಿಜೆಪಿಯ ಈ ತಿರಂಗ ಯಾತ್ರೆಯ ಕುರಿತು ಟ್ವೀಟ್ ಮಾಡಿರುವ ನಟ ಪ್ರಕಾಶ್ ರಾಜ್, ವೋಟಿಗಾಗಿ ರಸ್ತೆಯಲ್ಲಿ ಭಿಕ್ಷೆ ಎತ್ತುತ್ತಿರುವ ಭಿಕ್ಷುಕರು ಎಂದು ಟ್ವೀಟ್ ಮಾಡಿದ್ದಾರೆ. ನಟ ಪ್ರಕಾಶ್ ರಾಜ್ ಅವರ ಈ ಎಲ್ಲೆ ಮೀರಿದ ಟೀಕೆಗೆ ನೆಟ್ಟಿಗರು ಗರಂ ಆಗಿದ್ದು, ಕೆಲವರು ಪ್ರಕಾಶ್ ರಾಜ್ ಅವರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Desperate “___________” fill in the blanks please 😂😂😂😂… #Justasking https://t.co/srmogdxKLK
— Prakash Raj (@prakashraaj) May 16, 2025