ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ಮೇಲೆ ಈಗಾಗಲೇ ಎರಡು ಬಾರಿ ಮದ್ಯದ ಬೆಲೆ ಏರಿಕೆಯಾಗಿದೆ. ಇದರ ನಡುವೆ ಮಾರ್ಚ್ 7ರಂದು ಸಿಎಂ ಸಿದ್ದರಾಮಯ್ಯ ಅವರು ದಾಖಲೆಯ 16ನೇ ಬಜೆಟ್ ಮಂಡಿಸುತ್ತಿದ್ದಾರೆ. ಈ ಒಂದು ಬಜೆಟ್ ನಲ್ಲಿ ಮತ್ತೆ ಮದ್ಯದ ಬೆಲೆ ಏರಿಕೆ ಆಗುವ ಸಾಧ್ಯತೆ ಇದೆ ಎನ್ನಲಾಗಿದ್ದು, ಮದ್ಯಪ್ರಿಯರಿಗೆ ಆತಂಕ ಶುರುವಾಗಿದೆ.
ಹೌದು ರಾಜ್ಯ ಸರ್ಕಾರವು ಅನುದಾನವನ್ನು ಹೊಂದಿಸುವ ಕಾರಣಕ್ಕೆ ಈ ಬಾರಿಯ ಬಜೆಟ್‌ನಲ್ಲಿ ಡ್ರಿಂಕ್ಸ್ ಸೇರಿದಂತೆ ವಿವಿಧ ವಸ್ತುಗಳ ಮೇಲಿನ ಬೆಲೆಯನ್ನು ಹೆಚ್ಚಳ ಮಾಡುವ ಸಾಧ್ಯತೆ ಇದೆ. ಬೆಲೆ ಪರಿಷ್ಕರಣೆ ಮಾಡಬೇಕು ಅಂತ ಸ್ಟ್ರಾಂಗ್ ಬಿಯರ್ ಬೆಲೆ ಹೆಚ್ಚಳವಾದಾಗಲೇ ಬಿಯರ್ ಮಾರಾಟಗಾರರು ಆಗ್ರಹಿಸಿದ್ದರು.ಕರ್ನಾಟಕದಲ್ಲಿ ಉಳಿದ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಬಿಯರ್ ಬೆಲೆ ಹಾಗೂ ಕೆಲವು ಮದ್ಯದ ಬೆಲೆ ಹೆಚ್ಚಾಗಿದೆ. ಹೀಗಾಗಿ, ಈ ಬಾರಿಯೂ ಮದ್ಯದ ಬೆಲೆ ಹೆಚ್ಚಳವಾಗುವುದು ಬಹುತೇಕ ಖಚಿತ ಅಂತಲೇ ಹೇಳಲಾಗುತ್ತಿದೆ.