Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಗೂಗಲ್ ಸಿಇಒ ಸುಂದರ್ ಪಿಚೈ ಭೇಟಿಯಾದ ಪ್ರಧಾನಿ ಮೋದಿ: AI ಸಹಯೋಗದ ಕುರಿತು ಚರ್ಚೆ

18/02/2026 5:58 PM

ಫೆಬ್ರವರಿ.24, 25ರಂದು ಸೊರಬ ಚಂದ್ರಗುತ್ತಿಯ ರೇಣುಕಮ್ಮ ದೇವಿ ಜಾತ್ರಾ ಮಹೋತ್ಸವ: ಬೆತ್ತಲೆ ಸೇವೆ ನಿಷೇಧಿಸಿ ಡಿಸಿ ಆದೇಶ

18/02/2026 5:41 PM

BREAKING: ರಾಜ್ಯದಲ್ಲಿ ಮತ್ತೆ ಹಂತ ಹಂತವಾಗಿ ಸಫಾರಿ ಪುನರಾರಂಭ: ಸಚಿವ ಈಶ್ವರ್ ಖಂಡ್ರೆ

18/02/2026 5:26 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯದಲ್ಲಿ ಸಾರ್ವಜನಿಕರ ವಾಹನ ತಪಾಸಣೆ ವೇಳೆ ಸೌಜನ್ಯದಿಂದ ವರ್ತಿಸಿ : ಪೊಲೀಸರಿಗೆ ಸರ್ಕಾರದಿಂದ ಖಡಕ್ ಆದೇಶ.!
KARNATAKA

BIG NEWS : ರಾಜ್ಯದಲ್ಲಿ ಸಾರ್ವಜನಿಕರ ವಾಹನ ತಪಾಸಣೆ ವೇಳೆ ಸೌಜನ್ಯದಿಂದ ವರ್ತಿಸಿ : ಪೊಲೀಸರಿಗೆ ಸರ್ಕಾರದಿಂದ ಖಡಕ್ ಆದೇಶ.!

By kannadanewsnow5704/01/2026 4:58 AM

ಬೆಂಗಳೂರು; ವಾಹನ ತಪಾಸಣೆ, ಪರಿಶೀಲನೆ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಚಾಲಕರೊಂದಿಗೆ ಗೌರವದಿಂದ ವರ್ತಿಸುವಂತೆ ರಾಜ್ಯ ಸರ್ಕಾರವು ಖಡಕ್ ಸೂಚನೆ ಹೊರಡಿಸಿದೆ.

ಈ ಕುರಿತಂತೆ ಎಲ್ಲಾ ಪೊಲೀಸ್ ಆಯುಕ್ತರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸಂಚಾರ ಮತ್ತು ರಸ್ತೆ ಸುರಕ್ಷತೆಯ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು ಜ್ಞಾಪನ ಪತ್ರ ಹೊರಡಿಸಿದ್ದಾರೆ. ಅದರಲ್ಲಿ ರಾಜ್ಯ ಪೊಲೀಸ್ ಇಲಾಖೆಯು ಶಿಸ್ತಿನ ಇಲಾಖೆಯಾಗಿದ್ದು, ಕೆಲವು ಅಧಿಕಾರಿ ಸಿಬ್ಬಂದಿಗಳು ತೋರುತ್ತಿರುವ ದುರ್ನಡತೆ, ಅಧಿಕಾರ ದುರ್ಬಳಕೆಯಿಂದ ಸಂಪೂರ್ಣ ಪೊಲೀಸ್ ಇಲಾಖೆಯ ಗೌರವಕ್ಕೆ ಧಕ್ಕೆ ಉಂಟಾಗುತ್ತಿರುವುದು ಸಾರ್ವಜನಿಕರ ಗಮನಕ್ಕೆ ಬಂದಿರುತ್ತದೆ ಎಂದಿದ್ದಾರೆ.

ಈ ಕುರಿತು ಕಾಲಕಾಲಕ್ಕೆ ಪೊಲೀಸ್ ಇಲಾಖೆಯಿಂದ ಹಲವಾರು ಸುತ್ತೋಲೆ, ಜ್ಞಾಪನಗಳನ್ನು ಹೊರಡಿಸಿದ್ದರೂ ಸಹ ಕೆಲವು ಪೊಲೀಸ್‌ ಸಿಬ್ಬಂದಿಗಳು ವಾಹನ ತಪಾಸಣಾ ಸಂದರ್ಭದಲ್ಲಿ ವಾಹನ ಚಾಲಕರ ಮೇಲೆ ದೌರ್ಜನ್ಯ ಹಲ್ಲೆ, ಕಿರುಕುಳ, ಅವಹೇಳನಕಾರಿ, ಆವಾಚ್ಯ ಶಬ್ದಗಳ ಬಳಕೆ ಮಾಡಿ ಸಾರ್ವಜನಿಕ ಸ್ಥಳಗಳಲ್ಲಿ ವಾಗ್ವಾದಕ್ಕಿಳಿದು ಅವಮಾನ ಮಾಡುವಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ವರದಿಯಾಗುತ್ತಿರುವುದು ಕಂಡು ಬಂದಿರುತ್ತಿದೆ ಎಂದು ಹೇಳಿದ್ದಾರೆ.

ಈ ಕುರಿತು ಕೆಲವು ಘಟನೆಗಳು ಮಾಧ್ಯಮಗಳಲ್ಲಿ ಜಾಲತಾಣಗಳಲ್ಲಿ ಹರದಾಡಿದ್ದು ಅದರಲ್ಲಿ ಮಂಡ್ಯ ಜಿಲ್ಲೆಯಲ್ಲಿ ಸಂಚಾರಿ ಪೊಲೀಸರು ವಾಹನ ತಪಾಸಣಾ ಸಂದರ್ಭದಲ್ಲಿ ಮಗು ಮೃತಪಟ್ಟ ಪ್ರಕರಣ, ವಿಜಯನಗರ ಜಿಲ್ಲೆ ಕೂಡ್ಲಿಗಿಯಲ್ಲಿ ಸಾರಿಗೆ ಬಸ್ ಚಾಲಕನ ಮೇಲೆ ಪೊಲೀಸ್ ಪೇದೆಯಿಂದ ನಡೆದ ಹಲ್ಲೆ, ಚಿತ್ರಮರ್ಗದಲ್ಲಿ ವಾಹನ ಪರಿಶೀಲನೆ ವೇಳೆ ಆಟೋ ಚಾಲಕನಿಗೆ ಪೊಲೀಸ್‌ ಸಿಬ್ಬಂದಿ ಕಿರುಕುಳ ನೀಡಿದ್ದರಿಂದ ಮನನೊಂದ ಚಾಲಕ ಪೆಟ್ರೋಲ್‌ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ, ಸಂಡೂರಿನಲ್ಲಿ ಲಾರಿ ಚಾಲಕನ ಮೇಲೆ ಪೊಲೀಸ್ ಸಿಬ್ಬಂದಿಯೊಬ್ಬರು ದೌರ್ಜನ್ಯ ವೆಸಗಿದ ಘಟನೆ, ಇಂತಹ ಪ್ರಕರಣಗಳು ದಿನನಿತ್ಯ ಮರುಕಳಿಸುತ್ತಿದ್ದು ಸಾವರ್ಜನಿಕರು ರಾಜ್ಯ ಪೊಲೀಸ್‌ ಇಲಾಖೆಯನ್ನು ಆಗೌರವದಿಂದ ನೋಡುವಂತಾಗುತ್ತಿದೆ. ಈ ಬಗ್ಗೆ ಸೂಕ್ತ ನಿರ್ದೇಶನ ನೀಡುವಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕೋರಿರುತ್ತಾರೆ ಎಂದಿದ್ದಾರೆ.

ಆದ್ದರಿಂದ ಪೊಲೀಸ್ ಸಿಬ್ಬಂದಿಗಳು ದಂಡದ ಮೊತ್ತವನ್ನು ವಸೂಲಿ ಮಾಡುವಾಗ ಸಾರ್ವಜನಿಕರೊಂದಿಗೆ ಸೌಜನ್ಯದಿಂದ, ವಾಹನ ಚಾಲಕರೊಂದಿಗೆ ಗೌರವದಿಂದ ವರ್ತಿಸುವಂತೆ ಹಾಗೂ ಸಾವರ್ಜನಿಕರ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ, ತ್ವರಿತವಾಗಿ ಕ್ರಮ ಕೈಗೊಳ್ಳುವಂತೆ ಈ ಮೂಲಕ ಸೂಚಿಸಿದ್ದಾರೆ.

BIG NEWS: Be courteous when checking public vehicles in the state: Government orders police to be courteous!
Share. Facebook Twitter LinkedIn WhatsApp Email

Related Posts

ಫೆಬ್ರವರಿ.24, 25ರಂದು ಸೊರಬ ಚಂದ್ರಗುತ್ತಿಯ ರೇಣುಕಮ್ಮ ದೇವಿ ಜಾತ್ರಾ ಮಹೋತ್ಸವ: ಬೆತ್ತಲೆ ಸೇವೆ ನಿಷೇಧಿಸಿ ಡಿಸಿ ಆದೇಶ

18/02/2026 5:41 PM1 Min Read

BREAKING: ರಾಜ್ಯದಲ್ಲಿ ಮತ್ತೆ ಹಂತ ಹಂತವಾಗಿ ಸಫಾರಿ ಪುನರಾರಂಭ: ಸಚಿವ ಈಶ್ವರ್ ಖಂಡ್ರೆ

18/02/2026 5:26 PM3 Mins Read

ಪತ್ನಿ ಕೊಂದು ಮನೆ ಆವರಣದಲ್ಲೇ ಶವ ಹೂತಿಟ್ಟ ಪಾಪಿ ಪತಿ: 24 ದಿನಗಳ ಬಳಿಕ ರಹಸ್ಯ ಬಯಲು

18/02/2026 5:22 PM1 Min Read
Recent News

ಗೂಗಲ್ ಸಿಇಒ ಸುಂದರ್ ಪಿಚೈ ಭೇಟಿಯಾದ ಪ್ರಧಾನಿ ಮೋದಿ: AI ಸಹಯೋಗದ ಕುರಿತು ಚರ್ಚೆ

18/02/2026 5:58 PM

ಫೆಬ್ರವರಿ.24, 25ರಂದು ಸೊರಬ ಚಂದ್ರಗುತ್ತಿಯ ರೇಣುಕಮ್ಮ ದೇವಿ ಜಾತ್ರಾ ಮಹೋತ್ಸವ: ಬೆತ್ತಲೆ ಸೇವೆ ನಿಷೇಧಿಸಿ ಡಿಸಿ ಆದೇಶ

18/02/2026 5:41 PM

BREAKING: ರಾಜ್ಯದಲ್ಲಿ ಮತ್ತೆ ಹಂತ ಹಂತವಾಗಿ ಸಫಾರಿ ಪುನರಾರಂಭ: ಸಚಿವ ಈಶ್ವರ್ ಖಂಡ್ರೆ

18/02/2026 5:26 PM

ಪತ್ನಿ ಕೊಂದು ಮನೆ ಆವರಣದಲ್ಲೇ ಶವ ಹೂತಿಟ್ಟ ಪಾಪಿ ಪತಿ: 24 ದಿನಗಳ ಬಳಿಕ ರಹಸ್ಯ ಬಯಲು

18/02/2026 5:22 PM
State News
KARNATAKA

ಫೆಬ್ರವರಿ.24, 25ರಂದು ಸೊರಬ ಚಂದ್ರಗುತ್ತಿಯ ರೇಣುಕಮ್ಮ ದೇವಿ ಜಾತ್ರಾ ಮಹೋತ್ಸವ: ಬೆತ್ತಲೆ ಸೇವೆ ನಿಷೇಧಿಸಿ ಡಿಸಿ ಆದೇಶ

By kannadanewsnow0918/02/2026 5:41 PM KARNATAKA 1 Min Read

ಶಿವಮೊಗ್ಗ : ಸೊರಬ ತಾಲ್ಲೂಕಿನ ಚಂದ್ರಗುತ್ತಿ ಗ್ರಾಮದಲ್ಲಿ ಫೆ.24 ಮತ್ತು 25 ರಂದು ಶ್ರೀ ರೇಣುಕಮ್ಮ ದೇವಿ ಜಾತ್ರೆ ಮಹೋತ್ಸವ…

BREAKING: ರಾಜ್ಯದಲ್ಲಿ ಮತ್ತೆ ಹಂತ ಹಂತವಾಗಿ ಸಫಾರಿ ಪುನರಾರಂಭ: ಸಚಿವ ಈಶ್ವರ್ ಖಂಡ್ರೆ

18/02/2026 5:26 PM

ಪತ್ನಿ ಕೊಂದು ಮನೆ ಆವರಣದಲ್ಲೇ ಶವ ಹೂತಿಟ್ಟ ಪಾಪಿ ಪತಿ: 24 ದಿನಗಳ ಬಳಿಕ ರಹಸ್ಯ ಬಯಲು

18/02/2026 5:22 PM

ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿ: 2026ರ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಗೆ ಅರ್ಜಿ ಆಹ್ವಾನ

18/02/2026 4:51 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.