ಬೆಂಗಳೂರು : ಬೀದಿಬದಿಯ ವ್ಯಾಪಾರಿಗಳು ಸೇರಿದಂತೆ ಅಂಗಡಿ ಮುಗ್ಗಟ್ಟುಗಳ ಮಾಲೀಕರಿಗೆ ಕಮರ್ಷಿಯಲ್ ಡಿಪಾರ್ಟ್ಮೆಂಟ್ ಇತ್ತೀಚಿಗೆ ಲಕ್ಷಗಟ್ಟಲೆ, ಕೋಟಿಗಟ್ಟಲೆ ಟ್ಯಾಕ್ಸ್ ಕಟ್ಟುವಂತೆ ನೋಟಿಸ್ ನೀಡಿತ್ತು. ಇದರ ವಿರುದ್ಧವಾಗಿ ಇದೀಗ ವ್ಯಾಪಾರಿಗಳು ಕೇರಳಿದ್ದು, ಬೆಂಗಳೂರಿನಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಅಲ್ಲದೆ ಜುಲೈ 23 ಮತ್ತು 24ರಂದು ಹಾಲು ಮಾರಾಟ ಸಂಪೂರ್ಣ ಬಂದ್ ಆಗಲಿದ್ದು, 25ರಂದು ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ
ಹೌದು ವಾಣಿಜ್ಯ ತೆರಿಗೆ ನೋಟಿಸ್ ಗೆ ಬೆಂಗಳೂರಿನ ಕೆರಳಿದ ವರ್ತಕರು, ಸರಕಾರದ ವಿರುದ್ಧ ಹೋರಾಟಕ್ಕೆ ವ್ಯಾಪಾರಿಗಳು ಇದೀಗ ಸಿದ್ಧತೆ ಮಾಡಿಕೊಂಡಿದ್ದಾರೆ. ಜುಲೈ 25ಕ್ಕೆ ಅಂಗಡಿ ಬಂದಿದೆ ವರ್ತಕರು ನಿರ್ಧರಿಸಿದ್ದಾರೆ. ಜುಲೈ 23 24 ಬಂದಿದೆ ಜುಲೈ 25ರಂದು ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರಮಾಣದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.
ಬೆಂಗಳೂರಲ್ಲಿ ಆನ್ಲೈನ್ ಪೇಮೆಂಟ್ ವಿರುದ್ಧ ವ್ಯಾಪಾರಿಗಳು ಇದೀಗ ಸಮರ ಸಾರಿದ್ದು ಫೋನ್ ಪೇ ಮತ್ತು ಗೂಗಲ್ ಪೇ ಯಾವುದು ಬೇಡ ಓನ್ಲಿ ಕ್ಯಾಶ್ ತೆಗೆದುಕೊಂಡು ಬನ್ನಿ, ಡಿಜಿಟಲ್ ವಹಿವಾಟು ಬೇಡ ಅಂತ ವ್ಯಾಪಾರಿಗಳು ಇದೀಗ ಗ್ರಾಹಕರಿಗೆ ತಿಳಿಸಿದ್ದಾರೆ. ನಗದು ವ್ಯವಹಾರದ ವರ್ತಕರು ಮುಖ ಮಾಡುತ್ತಿದ್ದಾರೆ. ಬೇಕರಿ ಟೀ ಶಾಪ್ ಗಳಲ್ಲಿ ಕ್ಯೂ ಆರ್ ಕೋಡ್ ಮಾಯವಾಗಿದ್ದು, ಕರ್ನಾಟಕ ಕಮರ್ಷಿಯಲ್ ಟ್ಯಾಕ್ಸ್ ನೋಟಿಸ್ ಗೆ ವರ್ತಕರು ಇದೀಗ ಸೆಡ್ಡು ಹೊಡೆದಿದ್ದಾರೆ. ಆನ್ಲೈನ್ ವ್ಯವಹಾರಕ್ಕೆ ವ್ಯಾಪಾರಿಗಳು ಗುಡ್ ಬೈ ಸಹ ಹೇಳಿದ್ದಾರೆ.