ಬೆಂಗಳೂರು : ಬೆಂಗಳೂರಲ್ಲಿ ಯಾವಾಗಲು ತಂಪು ಇರುತ್ತೆ ಆದರೆ ಇದೀಗ ಕಳೆದ ಎರಡಮೂರು ದಿನಗಳಿಂದ ಸಿಕ್ಕಾಪಟ್ಟೆ ಬಿಸಿಲು ಇದ್ದುದ್ದರಿಂದ ತಾಪಮಾನ ಏರಿಕೆ ಆಗಿದೆ.ತಾಪಮಾನ ಏರಿಕೆಯಿಂದ ಜನ ಕಂಗೆಟ್ಟಿದ್ದಾರೆ. ಆರೋಗ್ಯ ಇಲಾಖೆ ಮಕ್ಕಳು, ವೃದ್ಧರು, ಗರ್ಭಿಣಿಯರಿಗೆ ವಿಶೇಷ ಎಚ್ಚರಿಕೆ ನೀಡಿದೆ. ನಿರ್ಜಲೀಕರಣ, ಚರ್ಮದ ಸಮಸ್ಯೆಗಳು ಹೆಚ್ಚುತ್ತಿದ್ದು, ಮಧ್ಯಾಹ್ನ ಬಿಸಿಲಿಗೆ ಮೈಯೊಡ್ಡದಂತೆ, ದೇಹವನ್ನು ಹೈಡ್ರೇಟ್ ಆಗಿರಿಸಿಕೊಳ್ಳುವಂತೆ ಸಲಹೆ ನೀಡಲಾಗಿದೆ.
ಬೆಂಗಳೂರಿನಲ್ಲಿ 36ರ ಗರಿಷ್ಠ ತಾಪಮಾನ ದಾಖಲಾಗಿದೆ. ಕ್ಷಣಕ್ಷಣಕ್ಕೂ ಏರಿಕೆ ಆಗುತ್ತಿರುವ ರಾಜಧಾನಿಯ ವಾತಾವರಣ ಬೆಂಗಳೂರಿಗರನ್ನ ಹೈರಾಣಾಗಿಸಿದೆ. ಮುಂಜಾನೆ ಸೂರ್ಯನ ಉದಯವಾಗುತ್ತಿದ್ದಂತೆ ಬಿರುಬಿಸಿಲು, ರಾತ್ರಿ ಆದರೆ ಬಿಸಿ ಗಾಳಿ, ಈ ವರ್ಷದ ತಾಪಮಾನ ಹಾಗೂ ಸೆಕೆಯಿಂದ ಜನರು ಕಂಗಾಲಾಗಿದ್ದರೆ ಗರ್ಭಿಣಿಯರು, ವೃದ್ಧರು, ಮಕ್ಕಳ ಬಗ್ಗೆ ವೈದ್ಯರು ತುಸು ಎಚ್ಚರ ಎನ್ನುತ್ತಿದ್ದಾರೆ.
ಬಿಸಿಲಿನ ಎಫೆಕ್ಟ್ ಜನರ ಆರೋಗ್ಯಕ್ಕೆ ಸಂಕಷ್ಟ ತರುತ್ತಿದೆ. ವೃದ್ಧರು, ಮಕ್ಕಳು ಹಾಗೂ ಗರ್ಭಿಣಿಯರಿಗೆ ವೆದರ್ ತೊಂದರೆ ಕೊಡುತ್ತಿದೆ. ಹೀಗಾಗಿ ಸಿಟಿಯ ಆಸ್ಪತ್ರೆಗಳಲ್ಲಿ ನಿತ್ರಾಣ, ನಿರ್ಜಲೀಕರಣ , ಚರ್ಮದಲ್ಲಿ ಅಲರ್ಜಿ ಹಾಗೂ ಅಜೀರ್ಣ ಸೇರಿದಂತೆ ಸಾಕಷ್ಟು ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ.
ಇನ್ನು ಆರೋಗ್ಯ ಇಲಾಖೆಯಿಂದ ಈಗಾಗಲೇ ಮಾರ್ಗಸೂಚಿ ನೀಡಲಾಗಿದೆ. ತಾಪಮಾನ ಇಳಿಕೆಯವರೆಗೂ ಅಂದರೆ 11 ರಿಂದ 4 ಗಂಟೆ ವರೆಗೆ ಹೆಚ್ಚು ಬಿಸಿಲಿಗೆ ಮೈ ಒಡ್ಡದೆ ಇರುವಂತೆ ಸಲಹೆ ನೀಡಲಾಗಿದೆ. ಇನ್ನು ಹೈ ಬಿಪಿ, ಹೃದಯ ಸಂಬಂಧಿ ಖಾಯಿಲೆ ಇರುವವರು ಗರ್ಭಿಣಿಯರು, ವೃದ್ಧರು ಮತ್ತು ಮಕ್ಕಳು ರಣ ಬಿಸಿಲಿಗೆ ಮೈ ಒಡ್ಡದಂತೆ ಎಚ್ಚರಿಕೆ ನೀಡಲಾಗಿದೆ.








