ಕೋಲಾರ : ಮದ್ಯ ಸೇವನೆ ಬಳಿಕ ಸ್ನಾಕ್ಸ್ ನೀಡಿದ್ದಕ್ಕೆ ಬಾರ್ ಕ್ಯಾಶಿಯರ್ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಕೊಲೆ ನಡೆದ 24 ಗಂಟೆಯಲ್ಲೇ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಕೋಲಾರ ಜಿಲ್ಲೆಯ ಮಾಲೂರು ಠಾಣೆ ಪೊಲೀಸರು ಕೊಲೆ ಆರೋಪಿ ಸುಭಾಷ್ ಅಲಿಯಾಸ್ ಮಿಯಾನನ್ನ ಅರೆಸ್ಟ್ ಮಾಡಿದ್ದಾರೆ.
ಬಾರ್ ಮುಚ್ಚುವ ವೇಳೆ ಬಂದು ಸ್ನಾಕ್ಸ್ ಕೊಡಿ ಅಂತ ಸುಭಾಷ್ ಕಿರುಕುಳ ನೀಡಿದ್ದಾನೆ. ಈ ವೇಳೆ ಕುಮಾರ್ ಸ್ನಾಕ್ಸ್ ಕೊಡಲು ಆಗಲ್ಲ ಅಂತ ಹೇಳಿದಾಗ ಕುಮಾರ ಪತ್ನಿ ಮತ್ತು ಮಕ್ಕಳ ಎದುರೇ ಸುಭಾಷ್ ಚಾಕು ಇರಿದು ಕುಮಾರನನ್ನ ಭೀಕರವಾಗಿ ಕೊಲೆ ಮಾಡಿದ್ದ. ಇದೀಗ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು 24 ಗಂಟೆಯಲ್ಲಿ ಆರೋಪಿ ಸುಭಾಷ್ ನನ್ನ ಅರೆಸ್ಟ್ ಮಾಡಿದ್ದಾರೆ.








