ಕೊಪ್ಪಳ : ಖ್ಯಾತ ಸಾಹಿತಿ ಬಾನು ಮುಷ್ತಾಕ್ ಅವರು ಈ ಬಾರಿ ದಸರಾ ಉದ್ಘಾಟಿಸಲಿದ್ದಾರೆ. ಈ ವಿಚಾರವಾಗಿ ಈಗಾಗಲೇ ವಿಪಕ್ಷಗಳು ಆಡಳಿತ ಪಕ್ಷದ ವಿರುದ್ಧ ಮುಗಿಬಿದ್ದಿದ್ದು, ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಿದ್ದು ಬಿಜೆಪಿ ನಾಯಕರನ್ನು ಕೆರಳಿಸಿದೆ. ಇದೀಗ ಶಾಸಕ ಜನಾರ್ಧನ ರೆಡ್ಡಿ ಬಾನು ಅವರು ದಸರಾ ಉದ್ಘಾಟನೆಗೆ ಹೂ ಮುಡಿದುಕೊಂಡು, ಅರಿಶಿನ ಕುಂಕುಮ ಇಟ್ಕೊಂಡು ಬಂದು ಉದ್ಘಾಟಿಸಲಿ ಎಂದು ಹೇಳಿಕೆ ನೀಡಿದ್ದಾರೆ.
ಮುಷ್ತಾಕ್ ಹಿಂದೂ ಸಂಪ್ರದಾಯವನ್ನು ಒಪ್ಪಿ ದಸರಾ ಉದ್ಘಾಟನೆ ಮಾಡಲಿ ತಲೆಗೆ ಹೂ ಮುಡಿದುಕೊಂಡು, ಅರಿಶಿನ ಕುಂಕುಮ ಇಟ್ಟುಕೊಂಡು ಬರಬೇಕು. ಆ ರೀತಿ ಬಂದು ದಸರಾ ಉದ್ಘಾಟಿಸಿದರೆ ನಮಗೆ ಯಾವುದೇ ರೀತಿಯ ಅಭ್ಯಂತರ ಇಲ್ಲ ಎಂದು ಕೊಪ್ಪಳದಲ್ಲಿ ಶಾಸಕ ಜನಾರ್ಧನ ರೆಡ್ಡಿ ಹೇಳಿಕೆ ನೀಡಿದರು
ನಿಸಾರ್ ಅಹ್ಮದ್ ಅವರಿಗೆ ನಾವು ಯಾವುದೇ ರೀತಿ ವಿರೋಧ ಮಾಡಿಲ್ಲ ಭಾನುಮಷ್ಟ ಕೀಳು ಮಟ್ಟದಲ್ಲಿ ಮಾತನಾಡಿದ್ದಾರೆ ಭುವನೇಶ್ವರಿ ಹಾಗೂ ಕನ್ನಡ ಧ್ವಜದ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ ಹಾಗಾಗಿ ನಾವು ಅವರಿಗೆ ಈ ಒಂದು ಕಂಡೀಷನ್ ಹಾಕುತ್ತಿದ್ದೇವೆ ಎಂದು ತಿಳಿಸಿದರು.