ಮೈಸೂರು : ಸಾಹಿತಿ ಭಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನ ನೀಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಕುರುಬರಹಳ್ಳಿ ಸರ್ಕಲ್ ಇಂದ ಬಿಜೆಪಿ ಇಂದು ಚಾಮುಂಡಿ ಹಮ್ಮಿಕೊಂಡಿತ್ತು. ಈ ವೇಳೆ ಬಿಜೆಪಿ ಶಾಸಕ ಶ್ರೀವತ್ಸ ಸ್ಥಳಕ್ಕೆ ಆಗಮಿಸಿದ್ದರು. ಆಗ ಪೊಲೀಸರು ಶಾಸಕ ಶ್ರೀವತ್ಸರನ್ನು ವಶಕ್ಕೆ ಪಡೆದಿದ್ದಾರೆ.
ಈ ವೇಳೆ ಪೊಲೀಸರ ಜೊತೆಗೆ ಬಿಜೆಪಿ ಶಾಸಕ ಶ್ರೀವತ್ಸ ವಾಗುವ ನಡೆಸಿದರು. ಕನಿಷ್ಠ ನಿಂತ್ಕೊಳ್ಳಕ್ಕಾದರೂ ಅವಕಾಶ ಕೊಡಿ ಇನ್ನು ಪ್ರತಿಭಟನೆನೆ ಶುರು ಮಾಡಿಲ್ಲ ಆಗಲೇ ಮಾಡುತ್ತಿದ್ದೀರಾ ಸುಮ್ನೆ ಬಂದು ನಿಂತ್ಕೊಂಡ್ರು ಅರೆಸ್ಟ್ ಮಾಡುತ್ತೀರಾ ಏನು ಅಂತ ಕೇಳಬಾರದು ಅಂತ ಶ್ರೀವತ್ಸ ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಹಿತ ದಲಿತ ಮಹಾಸಭಾ ಕಾರ್ಯಕ್ರಮಕ್ಕೂ ಬ್ರೇಕ್ ಹಾಕಲಾಗಿದ್ದು, ದಲಿತ ಮಹಾಸಭಾ ಕಾರ್ಯಕ್ರಮಕ್ಕೆ ಪೊಲೀಸರು ಬ್ರೇಕ್ ಹಾಕಿದ್ದಾರೆ.