ಬಾಗಲಕೋಟೆ : ಶಾಲಾ ಅನುದಾನ ದುರ್ಬಳಕೆ ಹಿನ್ನೆಲೆ ಮುಖ್ಯ ಶಿಕ್ಷಕ ಅಮಾನತು ಕೋಲೂರು ಪ್ರೌಢಶಾಲೆಯ ಮುಖ್ಯ ಶಿಕ್ಷಕ ಡಿಎಚ್ ಅಂಗಡಿ ಸಸ್ಪೆಂಡ್ ಆಗಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಕೋಲೂರು ಪ್ರೌಢಶಾಲೆಯ ಮುಖ್ಯ ಶಿಕ್ಷಕ ಡಿಹೆಚ್ ಅಂಗಡಿ ಅವರನ್ನು ಅಮಾನತು ಮಾಡಿ ಧಾರವಾಡದ ಶಾಲಾ ಶಿಕ್ಷಣ ಇಲಾಖೆ ಅಪರ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ವರ್ಗಾವಣೆ ಪತ್ರ ನೀಡಲು ವಿದ್ಯಾರ್ಥಿಗಳಿಂದ 100 ರೂಪಾಯಿ ವಸೂಲಿ ಹಾಗೂ 10ನೇ ತರಗತಿ ವಿದ್ಯಾರ್ಥಿಗಳ ಹಾಲ್ ಟಿಕೆಟ್ ಗೆ 100 ರೂ ವಸೂಲಿ ಮಾಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಅಟಲ್ ಟಿಂಕರಿಂಗ್ ಲ್ಯಾಬ್ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪ ಕೇಳಿ ಬಂದಿದೆ. ಮುಖ್ಯ ಶಿಕ್ಷಕ ಡಿಎಚ್ ಅಂಗಡಿ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಧಾರವಾಡದ ಶಾಲಾ ಶಿಕ್ಷಣ ಇಲಾಖೆ ಅಪರ ಆಯುಕ್ತರಿಂದ ಈ ಒಂದು ಆದೇಶ ಬಂದಿದೆ