ಮೈಸೂರು : ಚಿತ್ರದುರ್ಗದ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ನಟ ದರ್ಶನ್ ಅವರು ನಿನ್ನೆ ಸಂಜೆಯಷ್ಟೇ ಜೈಲಿನಿಂದು ಬಿಡುಗಡೆಯಾಗಿದ್ದು, ನಟ ದರ್ಶನ್ ರಾಜಕೀಯಕ್ಕೆ ಬಂದ್ರೆ ಉತ್ತಮ ಭವಿಷ್ಯವಿದೆ ಎಂದು ಅರ್ಜುನ್ ಅವಧೂತ ಗುರೂಜಿ ಭವಿಷ್ಯ ನುಡಿದಿದ್ದಾರೆ.
ನಟ ದರ್ಶನ್ ರಾಜಕೀಯ ಪ್ರವೇಶದ ಬಗ್ಗೆ ಭವಿಷ್ಯ ನುಡಿದಿರುವ ಅರ್ಜುನ್ ಅವಧೂತ ಗುರೂಜಿ, ನಟ ದರ್ಶನ್ ಗೆ ರಾಜಕೀಯದಲ್ಲಿ ಒಳ್ಳೆಯ ಭವಿಷ್ಯವಿದೆ. ನಟ ದರ್ಶನ್ ಗೆ ರಾಜಕೀಯಕ್ಕೆ ಬರುತ್ತಾರೆ. ಅವರು ಯಾರ ಮನೆ ಬಳಿ ಹೋಗಲ್ಲ, ರಾಜಕೀಯ ಪಕ್ಷಗಳೇ ಅವರನ್ನು ಹುಡುಕಿಕೊಂಡು ಬರುತ್ತವೆ ಎಂದು ಹೇಳಿದ್ದಾರೆ.
ದರ್ಶನ ರಾಜಕೀಯಕ್ಕೆ ಬರುತ್ತಾರೆ. ಅವರಿಗೆ ರಾಜಕೀಯದಲ್ಲಿ ಉತ್ತಮ ಭವಿಷ್ಯವಿದೆ ರಾಜಕೀಯ ಪಕ್ಷಗಳೇ ಅವರ ಬಳಿಗೆ ಹೋಗುತ್ತವೆ ಎಂದು ದರ್ಶನ್ ರಾಜಕೀಯ ಎಂಟ್ರಿ ಕುರಿತು ಮೈಸೂರಿನ ಅರ್ಜುನ್ ಅವಧೂತ ಗುರೂಜಿ ತಿಳಿಸಿದರು.
2025 ನೇ ಇಸವಿಯಲ್ಲಿ ದರ್ಶನವರಿಗೆ ಒಳ್ಳೆಯ ಭವಿಷ್ಯವಿದೆ. ದರ್ಶನ್ ರಿಲೀಸ್ ಆಗಿರುವುದು ಕನ್ನಡಿಗರಿಗೆ ಹಾಗೂ ಅವರ ಅಭಿಮಾನಿಗಳು ತುಂಬಾ ಸಂತಸ ತಂದಿದೆ. ಅದರಲ್ಲೂ ಅಭಿಮಾನಿಗಳ ಪ್ರಾರ್ಥನೆ, ವಿಜಯಲಕ್ಷ್ಮಿ ಅವರ ತಪಸ್ಸು ಹಾಗೂ ದಿನಕರ್ ತೂಗುದೀಪ ಅವರ ಪ್ರಯತ್ನದಿಂದ ಅವರು ದರ್ಶನ್ ಅವರು ರಿಲೀಸ್ ಆಗಿದ್ದಾರೆ ಮುಂದಿನ ದಿನಗಳಲ್ಲಿ ಅವರಿಗೆ ಒಳ್ಳೆಯ ಭವಿಷ್ಯವಿದೆ ಎಂದು ಅರ್ಜುನ್ ಅವಧೂತ ಗುರೂಜಿ ಹೇಳಿದರು.