ಬೆಂಗಳೂರು : ಪೋಷಕರೇ ಗಮನಿಸಿ, 2026-27 ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿವಸತಿ ಶಾಲೆಗಳ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10-02-2026 ಆಗಿದೆ.
ಅಲ್ಪಸಂಖ್ಯಾತರ ಸಮುದಾಯಗಳಾದ ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧ,, ಜೈನ್, ಸಿಖ್ ಮತ್ತು ಪಾರ್ಸಿ ಸಮುದಾಯದ ವಿದ್ಯಾರ್ಥಿಗಳಿಗೆ ನಿಯಮಾನುಸಾರ ಶೇ. 75% ಮೀಸಲಾತಿ
ಪ.ಜಾತಿ, ಪ.ಪಂಗಡ ಮತ್ತು ಇತರೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಶೇ. 25% ಮೀಸಲಾತಿ
ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ, ಲೇಖನ ಸಾಮಗ್ರಿ, ಸಮವಸ್ತ್ರ, ಶೂ ಮತ್ತು ಸಾಕ್ಸ್ ಮತ್ತು ಗುಣಾತ್ಮಕ ವಸತಿ ಸೌಲಭ್ಯಗಳು.
ಸ್ಪೋಕನ್ ಇಂಗ್ಲೀಷ್ ತರಬೇತಿ, ನಾಯಕತ್ವ ತರಬೇತಿ, ಜೆಇಇ /
ಬಾಲಕಿಯರಿಗೆ ಶೇ. 50% ಮೀಸಲಾತಿ
ವಿದ್ಯಾರ್ಥಿಗಳಿಗೆ ಉಚಿತ ಮತ್ತು ಗುಣಾತ್ಮಕ ವಸತಿಯುತ ಶಿಕ್ಷಣ.
ಎನ್‌ಇಇಟಿ, ಸಿಎಲ್‌ಎಟಿ ತರಬೇತಿಗಳು ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿ, ಜೀವನ ಕೌಶಲ್ಯ ತರಬೇತಿಗಳು ಇತ್ಯಾದಿಗಳನ್ನು ನೀಡಲಾಗುತ್ತದೆ. 2.
ಜಿಲ್ಲೆಗೊಂದರಂತೆ CBSE ಪಠ್ಯಕ್ರಮದ ಉತ್ಕೃಷ್ಟ ಶಾಲೆಗಳು,
https://sevasindhuservices.karnataka.gov.in
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು.
1. ವಿದ್ಯಾರ್ಥಿಯ ಸಾಟ್ಸ್ (SATS) ಐಡಿ ಸಂಖ್ಯೆ
2. ವಿದ್ಯಾರ್ಥಿಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಆರ್ ಡಿ(RD) ಸಂಖ್ಯೆ
3. ವಿದ್ಯಾರ್ಥಿಯ ಇತ್ತೀಚಿನ ಭಾವಚಿತ್ರ
4. ವಿಶೇಷ ವರ್ಗಗಳ ಮೀಸಲಾತಿ ಬಯಸುವ ಪ್ರಮಾಣ ಪತ್ರಗಳು
ಅರ್ಜಿ ಸಲ್ಲಿಸುವ ವಿಳಾಸ https://sevasindhuservices.karnataka.gov.in
ವಿವರವಾದ ಪ್ರವೇಶ ಅಧಿಸೂಚನೆ ಮತ್ತು ಶಾಲೆಗಳ ಪಟ್ಟಿಗಾಗಿ https://dom.karnataka.gov.in ಸಂಪರ್ಕಿಸಬಹುದಾಗಿದೆ.
ಇನ್ನೂ ಹೆಚ್ಚಿನ ವಿವರಗಳಿಗಾಗಿ ಸಂಬಂಧಪಟ್ಟ ಜಿಲ್ಲೆಗಳ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ, ಸಂಬಂಧಿಸಿದ ಅಲ್ಪಸಂಖ್ಯಾತರ ವಸತಿ ಶಾಲೆಗಳು, ಮತ್ತು ಸಮೀಪದ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳಲ್ಲಿ ಉಚಿತವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.
ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು
ಅಭ್ಯರ್ಥಿಯು 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರಬೇಕು / ಉತ್ತೀರ್ಣರಾಗಿಬೇಕು. ದಾಖಲೆಗಳ ಪರಿಶೀಲನೆಯ ಸಂದರ್ಭದಲ್ಲಿ ಅಂಕ ಪಟ್ಟಿಯನ್ನು ಹೊಂದಿರಬೇಕು.
ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.
ವಾರ್ಷಿಕ ಆದಾಯ 2.5 ಲಕ್ಷವಿರಬೇಕು.










