ಉಡುಪಿ : ಕಳೆದ ಕೆಲವು ದಿನಗಳ ಹಿಂದೆ ಅಷ್ಟೇ, ಮಂಗಳೂರಿನಲ್ಲಿ ರೌಡಿಶೀಟರ್ ಹಾಗು ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯ ಭೀಕರವಾಗಿ ಕೊಲೆಯಾಗಿತ್ತು. ಇದೀಗ ಉಡುಪಿಯಲ್ಲಿ ಬುರ್ಖಾಧಾರಿ ಮಹಿಳೆಯರು ಮಕ್ಕಳನ್ನು ಅಪಹರಿಸಲು ಯತ್ನಿಸಿದ್ದಾರೆ. ಈ ವೇಳೆ ತಡೆಯಲು ಬಂದ ತಾಯಿಗೆ ಚಾಕು ಇರಿದಿರುವ ಘಟನೆ ನಡೆದಿದೆ.
ಹೌದು ಇಬ್ಬರು ಬುರ್ಖಾಧಾರಿ ಮಹಿಳೆಯರು ಮಗುವನ್ನು ಅಪಹರಿಸಲು ಯತ್ನಿಸಿರುವುದು ಉಡುಪಿಯ ಕಾಪು ತಾಲೂಕಿನ ಬೆಳಪು ಗ್ರಾಮದಲ್ಲಿ ನಡೆದಿದೆ. ಈ ವೇಳೆ, ತಡೆಯಲು ಬಂದ ಮಗುವಿನ ತಾಯಿಗೆ ಬುರ್ಖಾಧಾರಿ ಮಹಿಳೆಯರು ಚಾಕು ಇರಿದಿದ್ದಾರೆ.
ಘಟನೆ ಹಿನ್ನೆಲೆ?
ಬೆಳಪು ಗ್ರಾಮ ಪಂಚಾಯತ್ ವ್ಯಾಪ್ತಿಯ ಜನತಾ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಕಾಲೋನಿಯ ಮೊಹಮ್ಮದ್ ಅಲಿ ಮನೆಗೆ ಇಬ್ಬರು ಬುರ್ಖಾಧಾರಿಗಳು ಬಂದು, ಶೌಚಾಲಯ ಬಳಸುತ್ತೇವೆ ಎಂದು ಮನೆಗೆ ಪ್ರವೇಶಿಸಿದ್ದರು. ಈ ವೇಳೆ ಓರ್ವ ಬುರ್ಖಾಧಾರಿ ಮಹಿಳೆ ತೊಟ್ಟಿಲಿನಲ್ಲಿ ಮಲಗಿದ್ದ ಮಗುವನ್ನ ಎತ್ತಿಕೊಂಡು ಓಡಿ ಹೋಗಲು ಯತ್ನಿಸಿದ್ದಾಳೆ.
ತಕ್ಷಣ ಮಹಿಳೆಯನ್ನು ಮಗುವಿನ ತಾಯಿ ತಾಬರಿಸ್ ತಡೆದಿದ್ದಾರೆ. ಈ ವೇಳೆ ಮಗುವನ್ನು ಬಿಟ್ಟು, ತಾಬರಿಸ್‍ಗೆ ಮಹಿಳೆಯರು ಚಾಕು ಇರಿದು ಪರಾರಿಯಾಗಿದ್ದಾರೆ.ಶಿರ್ವ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಮಹಿಳೆಯರು ಧರಿಸಿದ್ದ ಬುರ್ಖಾ ಬೆಳಪು ರೈಲ್ವೇ ಹಳಿಯ ಮೇಲೆ ಪತ್ತೆಯಾಗಿದೆ.