ಬೆಂಗಳೂರು : 2017ರಲ್ಲಿ ವೈದ್ಯರ ಮೇಲೆ ಅನಂತ್ ಕುಮಾರ್ ಹೆಗಡೆ ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅನಂತ್ ಕುಮಾರ್ ಹೆಗಡೆ ಪರ ವಕೀಲರು ಸತತವಾಗಿ ಗೈರು ಹಾಜರಿ ಹಿನ್ನೆಲೆಯಲ್ಲಿ ಪ್ರಕರಣ ರದ್ದು ಕೋರಿದ ಅನಂತ್ ಕುಮಾರ್ ಹೆಗಡೆ ಅರ್ಜಿಯನ್ನು ಇದೀಗ ಹೈಕೋರ್ಟ್ ವಜಗೊಳಿಸಿದೆ.
ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಅವರಿದ್ದ ಹೈಕೋರ್ಟ್ ಪೀಠ ಈ ಕುರಿತು ಆದೇಶ ಹೊರಡಿಸಿದ್ದು, ತಾಯಿಗೆ ವೈದ್ಯರು ಚಿಕಿತ್ಸೆ ನೀಡಿಲ್ಲವೆಂದು ವೈದ್ಯರ ಮೇಲೆ ಅನಂತ್ ಕುಮಾರ್ ಹೆಗಡೆ ಹಲ್ಲೆ ಮಾಡಿದ್ದರು. ಈ ಕುರಿತು 2017ರಲ್ಲಿ ಅನಂತ್ ಕುಮಾರ್ ಹೆಗಡೆ ವಿರುದ್ಧ ಪ್ರಕರಣ ಸಹ ದಾಖಲಿಸಲಾಗಿತ್ತು.
ಪ್ರಕರಣಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾ ಜ್ಞೆ ನೀಡಿತ್ತು. ಕೋರ್ಟ್ ಸೂಚಿಸಿದ್ದರು ಕೂಡ ಸರ್ಕಾರಿ ವಕೀಲರಿಗೆ ಅರ್ಜಿ ಪ್ರತಿ ನೀಡಿರಲಿಲ್ಲ. ಅಲ್ಲದೆ ಅನಂತ್ ಕುಮಾರ್ ಹೆಗಡೆ ಪರ ವಕೀಲರು ಕೋರ್ಟಿಗೆ ಸತತ ಗೈರು ಮತ್ತು ಅರ್ಜಿಯ ಪ್ರತಿ ಸಲ್ಲಿಸದ ಹಿನ್ನೆಲೆಯಲ್ಲಿ ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.