ಬೆಂಗಳೂರು : ರಾಜ್ಯಾದ್ಯಂತ ಸೆಪ್ಟೆಂಬರ್ 22 ರಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಜಿಲ್ಲಾ ಮಟ್ಟದಲ್ಲಿ ನಿಗದಿತ ಸಂಖ್ಯೆಯಷ್ಟು ಶಿಕ್ಷಕರು ಲಭ್ಯವಿಲ್ಲದೇ ಇದ್ದಲ್ಲಿ ಇತರೆ ಮೂಲಗಳಿಂದ ಪಡೆಯುವ ಬಗ್ಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಜಿಲ್ಲಾ ಮಟ್ಟದಲ್ಲಿ ನಿಗದಿತ ಸಂಖ್ಯೆಯಷ್ಟು ಶಿಕ್ಷಕರು ಲಭ್ಯವಿಲ್ಲದೇ ಇರುವ ಬಗ್ಗೆ ಕೆಲವು ಜಿಲ್ಲೆಗಳಿಂದ ಮಾಹಿತಿ ನೀಡಿ ಈ ಬಗ್ಗೆ ಮುಂದಿನ ನಿರ್ದೇಶನವನ್ನು ಕೋರಿರುತ್ತಾರೆ.
ಈ ಬಗ್ಗೆ ಉಲ್ಲೇಖಿತದಲ್ಲಿ ನಡೆದ ಆಯೋಗದ ಸಭೆಯಲ್ಲಿ ಚರ್ಚಿಸಲಾಗಿದ್ದು, ಅನುದಾನಿತ ಶಾಲೆಗಳ ಖಾಯಂ ಶಿಕ್ಷಕರು, ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಖಾಯಂ ಸಿಬ್ಬಂದಿಗಳು ಮತ್ತು ಇತರೆ ಇಲಾಖೆಗಳ ಖಾಯಂ ಸಿಬ್ಬಂದಿಗಳನ್ನು ಬಳಸಿಕೊಂಡು, ಸಮೀಕ್ಷಾ ಕಾರ್ಯವನ್ನು ಪೂರ್ಣಗೊಳಿಸಲು ಜಿಲ್ಲೆಗಳಿಗೆ ತಿಳಿಸುವಂತೆ ತೀರ್ಮಾನಿಸಲಾಗಿರುತ್ತದೆ. ಅದರಂತೆ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಅಗತ್ಯ ಸಂಖ್ಯೆಯಷ್ಟು ಸಮೀಕ್ಷಾದಾರರನ್ನು ನಿಯೋಜಿಸಲು ಕ್ರಮ ವಹಿಸುವಂತೆ ಕೋರಿದೆ.