ದಾವಣಗೆರೆ : ಸೂರ್ಯ ಚಂದ್ರ ಇರೋವರೆಗೂ ವೀರಶೈವ ಲಿಂಗಾಯತರು ಒಂದೇ ಎಂದು ವೀರಶೈವ ಪೀಠಾಚಾರ್ಯರ ಶೃಂಗ ಸಭೆಯಲ್ಲಿ ಅಖಿಲ ಭಾರತ ವೀರಶೈವ ಮಹಾ ಸಭೆಯ ರಾಜ್ಯಾಧ್ಯಕ್ಷ ಶಂಕರ್ ಬಿದರಿ ಈ ಒಂದು ಹೇಳಿಕೆ ನೀಡಿದ್ದಾರೆ. ದಾವಣಗೆರೆ ನಗರದಲ್ಲಿ ವೀರಶೈವ ಪೀಠಾಚಾರ್ಯರ ಶೃಂಗಸಭೆ ಆಯೋಜನೆ ಮಾಡಲಾಗಿದ್ದು, ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಈ ಒಂದು ಶೃಂಗಸಭೆ ನಡೆಯಲಿದೆ.
ಲಿಂಗಾಯತ ಸಮುದಾಯ ಹಿಂದೂ ಸಮಾಜದಲ್ಲಿ ಬರಬೇಕು ಸನಾತನ ಪರಂಪರೆಯಲ್ಲಿ 99 ಜಾತಿಗಳು ಲಿಂಗಾಯತರು ಇದ್ದಾರೆ. ವಾರ್ಷಿಕ ಆದಾಯದಲ್ಲಿ 2% ಸಮುದಾಯದ ಉನ್ನತಿಗೆ ಬರಬೇಕು. ಕಡಿಮೆ ಆದಾಯ ಇದ್ದವರನ್ನು ಹಿಂದುಳಿದ ವರ್ಗ ಎಂದು ಪರಿಗಣನೆ ಮಾಡಲಾಗಿದೆ. ವೀರಶೈವ ಲಿಂಗಾಯತ ಎರಡು ಒಂದೇ ಇದನ್ನೇ ಮಹಾಸಭೆ ಒಪ್ಪಿದೆ ಎಂದು ಅಖಿಲ ಭಾರತ ವೀರಶೈವ ಮಹಾ ಸಭೆಯ ರಾಜ್ಯಾಧ್ಯಕ್ಷ ಶಂಕರ್ ಬಿದರಿ ಹೇಳಿಕೆ ನೀಡಿದ್ದಾರೆ.
ವೀರಶೈವ ಪಂಚಪೀಠಗಳು ಒಂದೇ ವೇದಿಕೆಯಲ್ಲಿ ಆಗಮಿಸಿದ್ದಾರೆ. ಇಂದು ಕೋಟ್ಯಾಂತರ ಭಕ್ತರ ಆಸೆ ಪೂರೈಕೆಯಾಗಿದೆ. 16 ವರ್ಷಗಳ ಬಳಿಕ ಒಂದೇ ವೇದಿಕೆಯಲ್ಲಿ ಕಾಣಿಸಿದ್ದು, ಇದೊಂದು ಶುಭ ಸೂಚನೆಯಾಗಿದೆ. ಗುರುವರ್ಗ ವಿರಕ್ತರು ಹಾಗೂ ಶರಣವರ್ಧಗಳು ಒಂದಾಗಬೇಕು ಸ್ವಾಮೀಜಿಗಳ ಪೂಜಾ ನಿಷ್ಠೆಯಿಂದಾಗಿ ಪಂಚಪೀಠಗಳು ಒಂದಾಗಿವೆ ಎಂದು ಶಂಕರ್ ಬಿದರಿ ಹೇಳಿಕೆ ನೀಡಿದರು.